ವೇಗವಾಗಿ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು

ವೇಗವಾಗಿ ಬಂದ ಕಾರು ಚಾಲಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಬಳಿ ನಡೆದಿದೆ.

ಯಶವಂತ್ ಹಾಗೂ ನಿಖಿತಾ ಇಬ್ಬರು ಬೈಕ್ ಸವಾರರು, ಜಯನಗರದಿಂದ ವಸಂತ ನಗರದ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಕಾರಿನಲ್ಲಿದ್ದ ಅಬ್ದುಲ್ ವಾಜೀದ್ ಪುತ್ರ ಯಾಯಿದ್ ವೇಗವಾಗಿ ಬಂದು ಬೈಕ್ ಗುದ್ದಿದ್ದಾರೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಗಾಯಾಳು ಯಶವಂತ್ ಕಾಲಿನ ಮೂಳೆ ಮುರಿತವಾಗಿದ್ದು, ಬೈಕ್ ಹಿಂಬದಿ ಸವಾರ ನಿಖಿತಾಗೆ ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಸ್ಥಳ ಪರಿಶೀಲಿಸಿದ ಹೈಗ್ರೌಂಡ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *