ಫುಟ್ಬಾಲ್ ಟೂರ್ನಿಯ ವೇಳೆ ಅಭಿಮಾನಿಗಳ ನಡುವೆ ಬಡಿದಾಟ..! 29 ಮಂದಿ ಆಸ್ಪತ್ರೆಗೆ ದಾಖಲು

ಕ್ರೀಡೆ

ಮೆಕ್ಸಿಕನ್ ಸಿಟಿ : ಮೆಕ್ಸಿಕನ್‌ ಫುಟ್ಬಾಲ್‌ನ ಎರಡು ಕ್ಲಬ್‌ ತಂಡಗಳ ನಡುವಿನ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಕನಿಷ್ಠ 29 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಕ್ವಾರೆಟ್ಟಾರೋದ ಲಾ ಕೊರೆಗಿಡೋರಾ ಮೈದಾನದಲ್ಲಿ ಕ್ವಾರೆಟಾರೊ ಹಾಗೂ ಅಟ್ಲಾಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯ ಆರಂಭವಾಗಿ ಒಂದು ಗಂಟೆ ಕಳೆಯುವಷ್ಟರಲ್ಲಿ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ.

ಈ ಘಟನೆಯ ವೇಳೆ ಕೆಲವು ಅಭಿಮಾನಿಗಳು, ಚಿಕ್ಕ ಮಕ್ಕಳು ಹಾಗೂ ಮತ್ತವರ ಪೋಷಕರು ಸ್ಟೇಡಿಯಂನಿಂದ ಪಾರಾಗಲು ಯತ್ನಿಸಿದಾ ಗ ಸಾಕಷ್ಟು ನೂಕುನುಗ್ಗಲು ಉಂಟಾಗಿದೆ. ಸ್ಟೇಡಿಯಂನಲ್ಲಿ ಉಭಯ ತಂಡಗಳ ಅಭಿಮಾನಿಗಳ ಹೊಡೆದಾಟ ಜೋರಾಗುತ್ತಿದ್ದಂತೆಯೇ ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿ, ಪ್ರೇಕ್ಷಕರು ಈ ಘಟನೆಯಿಂದ ಪಾರಾಗಲು ಸ್ಟೇಡಿಯಂ ಗೇಟ್ ಓಪನ್ ಮಾಡಿದ್ದಾರೆ. ತಕ್ಷಣ ಪಂದ್ಯ ವನ್ನು ಸ್ಥಗಿತಗೊಳಿಸಿ, ಸುರಕ್ಷಿತವಾಗಿ ಆಟಗಾರರನ್ನು ಕೊಂಡೊಯ್ಯಲಾಗಿದೆ.

https://twitter.com/search?q=Mexican%20football%20match&src=typed_query

ಈ ಘಟನೆಯಲ್ಲಿ ಗಾಯಾಳುಗಳಾದ 29 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಪೈಕಿ ಮೂರು ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇನ್ನು ಮೂರು ಮಂದಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಇನ್ನು 10 ಮಂದಿಯ ಆರೋಗ್ಯ ಸ್ಥಿತಿ ತುಂಬಾ ಸೂಕ್ಷ್ಮವಾಗಿದ್ದು, ಇನ್ನು 10 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಕ್ವಾರೆಟರೊ ರಾಜ್ಯದ ಗರ್ವನರ್ ಮೊರಿಸಿಯೊ ಕುರಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಇದನ್ನು ನಾವು ದುರಂತವೆಂದು ಹೇಳಲು ಸಾಧ್ಯವಿಲ್ಲ ಎಂದು ಗರ್ವನರ್ ಮೊರಿಸಿಯೊ ಕುರಿ ಹೇಳಿದ್ದಾರೆ.

Leave a Reply

Your email address will not be published. Required fields are marked *