ತಮಿಳುನಾಡಿನಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ ಬೆಂಗಳೂರಿನಲ್ಲಿ ಪತ್ತೆ..! ಆರೋಪಿ ಅರೆಸ್ಟ್

ಬೆಂಗಳೂರು

ಬೆಂಗಳೂರು: ತಮಿಳುನಾಡಿನಲ್ಲಿ ಕಳುವಾಗಿದ್ದ ವಾಹನವೊಂದು ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ದ್ವಿಚಕ್ರ ವಾಹನ ಬಳಸುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಯಾಸೀನ್ ಉಲ್ಲಾ ಖಾನ್ ಬಂಧಿತ ಆರೋಪಿ. ಈತ ತಮಿಳುನಾಡಿನಲ್ಲಿ ಕಳ್ಳತನವಾಗಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಿಸಿ ಬಳಸುತ್ತಿದ್ದ. ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯ  ಪಿಎಸ್ಐ ಅಂಜನಮೂರ್ತಿ ಹಾಗೂ ಹೆಡ್ ಕಾನ್ಸ್ ಟೇಬಲ್ ಅನಂತ ಕುಮಾರ್ ಹೆಲ್ಮೆಟ್ ರಹಿತ ಚಾಲನೆಗೆ ಆರೋಪಿಯನ್ನ ತಡೆದು ವಾಹನದ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ.

ದಾಖಲೆಗಳ ಪರಿಶೀಲನೆ ವೇಳೆ ತಮಿಳುನಾಡಿನ ದ್ವಿಚಕ್ರ ವಾಹನ ಎಂಬುದು ಪತ್ತೆಯಾಗಿದೆ. ಯಾಸೀನ್ ಉಲ್ಲಾ ಖಾನ್ ಕದ್ದ ದ್ವಿಚಕ್ರ ವಾಹನವನ್ನು ಸ್ನೇಹಿತನಿಂದ ಪಡೆದು, ನಂಬರ್ ಬದಲಿಸಿ ಬೆಂಗಳೂರಿನಲ್ಲಿ ಬಳಸುತ್ತಿದ್ದನು. ಚಿಕ್ಕಪೇಟೆ ಸಂಚಾರಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ಚಾಮರಾಜಪೇಟೆ ಪೊಲೀಸರಿಗೆ ಒಪ್ಪಿಸಿದ್ಧಾರೆ.

Leave a Reply

Your email address will not be published. Required fields are marked *