ಬಿಜೆಪಿ ರಾಜಕೀಯ ಮಾಡೋದು ಬಿಟ್ಟು ಯೋಜನೆ ಜಾರಿ ಮಾಡಲಿ: ಮಾಜಿ ಸಚಿವ ಎಂ.ಬಿ ಪಾಟೀಲ್

ಬೆಂಗಳೂರು

ಬೆಂಗಳೂರು : ಇದು ಡಿಕೆ ಬ್ರದರ್ಸ್ ಪಾದಯಾತ್ರೆ ಅಲ್ಲ, ಇದು ಕಾಂಗ್ರೆಸ್ ನ ಪಾದಯಾತ್ರೆ ಅಂತ ಬೆಂಗಳೂರಿನಲ್ಲಿ, ಕಾಂಗ್ರೆಸ್​ನ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮೇಕೆದಾಟು ಯೋಜನೆಗಾಗಿ ಡಿಪಿಆರ್ ಸಿದ್ದಪಡಿಸಿ ಫೈನಲ್ ಹಂತಕ್ಕೆ ತಂದಿತ್ತು. ಆದರೆ ಇವತ್ತು ಸಚಿವ ಗೋವಿಂದ್ ಕಾರಜೋಳ ಅನುಷ್ಠಾನ ಜಾರಿ ಮಾಡದೇ ಖಾಲಿ ಜಾಹೀರಾತು ಮಾಡುತ್ತಾ ಕಾಲಹರಣ ಮಾಡ್ತಿದ್ದಾರೆ. ನಾವೂ ಕಲಾಪ ಹಾಳು ಮಾಡಿಲ್ಲ.ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಕ್ಕೆ ಹೋರಾಟ ಮಾಡಿದ್ದು. ರಾಜಕೀಯ ಬಿಜೆಪಿ ಮಾಡೋದು ಬಿಟ್ಟು ಯೋಜನೆ ಜಾರಿ ಮಾಡಲಿ ಎಂದು ಪಾದಯಾತ್ರೆ ವೇಳೆ ಎಂ.ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *