ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ‘’ಮನಸ್ಮಿತ’’: ಪ್ರೇಕ್ಷಕರ ಮನಗೆದ್ದ ಸಿನಿಮಾದ ಹಾಡುಗಳು

ಚಲನಚಿತ್ರ

ಸ್ಯಾಂಡಲ್ ವುಡ್ ನಲ್ಲಿ ಸಂಗೀತ ಮೂಲಕ ಮೋಡಿ ಮಾಡಲು ಬರುತ್ತಿದೆ ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ಸಿನಿಮಾ ಮನಸ್ಮಿತ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮ್ಯಾಜಿಕ್ ಮಾಡಲು ಬರುತ್ತಿದ್ದು , ಸಿನಿಮಾ ಹಾಡುಗಳು ಈಗಾಗಲೇ ಗಮನ ಸೆಳೆಯುತ್ತಿದೆ.. ಈಗಾಗಲೇ ಶಂಕರ್ ಮಹದೇವನ್ ಅವರು ಹಾಡಿರುವ ಮೊದಲ ಹಾಡು ಸಿನಿಪ್ರಿಯರ ಮನಗೆದ್ದಿದ್ದು, ಏಪ್ರಿಲ್ 28 ರಂದು 2ನೇ ಹಾಡನ್ನ ಸಿನಿಮಾತಂಡ ರಿಲೀಸ್ ಮಾಡಿದೆ..

ಮನಸ್ಮಿತ ಸಿನಿಮಾದ ಮೊದಲ ಹಾಡಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು.. ವಾರದ ಹಿಂದೆ ರಿಲೀಸ್ ಆದ ಹಾಡಿಗೆ ಸಂಗೀತ , ಸಿನಿಮಾ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.. ಸಂಪೂರ್ಣ ಶಾಸ್ತ್ರೀಯ ಸಂಗೀತದಲ್ಲಿ ಕ್ಲಾಸಿಕಲ್ ನೃತ್ಯ ಸಂಯೋಜನೆಯ ‘ನೀಲ ಮೇಘ ಶ್ಯಾಮ’ ಹಾಡಿಗೆ ಜನರು ಫಿದಾ ಆಗಿದ್ದಾರೆ.. ಅದ್ರಲ್ಲೂ ಶಂಕರ್ ಮಹದೇವನ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡು ಜನರನ್ನ ಮೈಮರೆಸುತ್ತದೆ.. ಹಾಡಿಗೆ ಮಂಜು ಎಮ್ ದೊಡ್ಡಮಣಿ ಅವರು ಅಧ್ಬುತವಾದ ಅರ್ಥಪೂರ್ಣ ಲಿರಿಕ್ಸ್ ಬರೆದಿದ್ದಾರೆ..

ಇದೀಗ ರಿಲೀಸ್ ಆಗಿರುವ 2 ನೇ ಹಾಡಂತೂ ಕಂಪ್ಲೀಟಾಗಿ ಮೆಲೋಡಿ ಹಾಡು… ರೋಮ್ಯಾಂಟಿಕ್ ಮೆಲೋಡಿ ಹಾಡು ‘ಮುದ್ದಾದ ಬಾನುಲಿ ವರದಿ’ ಹಾಡು ಸಹ ಅಷ್ಟೇ ಮೋಡಿ ಮಾಡುತ್ತಿದೆ.. ನಾಯಕ ನಾಯಕಿಯ ಕೆಮಿಸ್ಟ್ರಿ ಅಧ್ಬುತವಾಗಿ ತೋರಿಸಲಾಗಿದೆ ಈ ಹಾಡಿನ ಮೂಲಕ.. ಸಾಂಗ್ ಶೂಟ್ ಮಾಡಿರುವ ಲೊಕೇಶನ್ ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಹಾಡು ಕೇಳ್ತಿದ್ರೆ ಮನಸ್ಸಿಗೆ ಮುದ ನೀಡುತ್ತೆ.

ಮೈ ಮರೆಸುವ ಈ ಹಾಡಿಗೆ ಸಿನಿಮಾದ ಸಂಗೀತ ಜವಾಬ್ದಾರಿ ಹೊತ್ತಿರುವ ಮ್ಯೂಸಿಕ್ ಡೈರೆಕ್ಟರ್ ಹರಿಕಾವ್ಯ ಅವರೇ ಧ್ವನಿಯಾಗಿ ಜೀವ ತುಂಬಿದ್ದಾರೆ.. ಅವರ ಜೊತೆಗೆ ಹರಿಹರನ್ , ಸನಾ ಮೈದುಟ್ಟಿ ಈ ಹಾಡಿಗೆ ಕಂಠದಾನ ಮಾಡಿದ್ದಾರೆ.. ಕೆ . ಕಲ್ಯಾಣ್ ಈ ಹಾಡು ರಚಿಸಿದ್ದಾರೆ..ಅಪ್ಪಣ್ಣ ಸಂತೋಷ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಹೊಸಬರ ದಂಡೇ ಇದೆ.. ಜೊತೆಗೆ ಅನುಭವಿ ನಟರ ಸಾಥ್ ಇದೆ… ಸ್ವರ ಸಂಗೀತದ ತಾಳದ ಬೆಸುಗೆ ಜೊತೆಗೆ ಪ್ರೀತಿಯ ಕಥೆಪ್ರೇಕ್ಷಕರ ಮನ ಗೆಲ್ಲಲು ಇದೇ ಜೂನ್ 3 ರಂದು ಬಿಗ್ ಸ್ಕ್ರೀನ್ ಗೆ ಬರುತ್ತಿದೆ.ಒಟ್ಟಾರೆ ಸಿನಿಮಾ ಹಾಡುಗಳು , ತಾರಾಬಳಗದ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದೆ..

ಸೀತಮ್ಮ ವಿ.ಟಿ ನಿರ್ಮಾಣದ ಸಿನಿಮಾದಲ್ಲಿ ಚರಣ್ ಗೌಡ , ಸಂಜನಾ ದಾಸ್ , ಬಹುಭಾಷಾ ನಟ ಅತುಲ್ ಕುಲಕರ್ಣಿ , ಪಲ್ಲವಿ ಪುರೋಹಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.. ಇವರ ಹೊರತಾಗಿ ಸುಚೇಂದ್ರ ಪ್ರಸಾದ್ , ರಾಜೇಂದ್ರ ಕಾರಂತ್, M N ಸುರೇಶ್ @ ಮುಗು ಸುರೇಶ್ , ಕರಿ ಸುಬ್ಬು , ಶಿಲ್ಪಾ , ವೀಣಾ ಪೊನ್ನಪ್ಪ , ಸೌಭಾಗ್ಯ , ಪ್ರದೀಪ್ ಶಾಸ್ತ್ರಿ , ಪ್ರದೀಪ್ ಪೂಜಾರಿ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಇನ್ನು ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣ, ಮಧು ಅವರ ಸಂಕಲನವಿದೆ.

ಅಂದ್ಹಾಗೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಅಪ್ಪಣ್ಣ ಸಂತೋಷ್ ಸಿನಿಮಾದ ಜರ್ನಿ ಬಗ್ಗೆ ಮಾತನಾಡ್ತಾ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.. “ ತಾವು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದು ಬಾಲ್ಯದಿಂದಲೇ ನಟನೆ ಸಿನಿಮಾರಂಗದ ಆಸೆ ಬೆಳೆಸಿಕೊಂಡು , ನಾನಾ ವಿಭಾಗಗಳಲ್ಲಿ ಕೆಲಸ ಮಾಡಿ ತಮ್ಮ 26 ನೇ ವಯಸ್ಸಿನಲ್ಲಿಯೇ ಸ್ವಂತ ಕನ್ಸ್ಟ್ರಕ್ಷನ್ ಕಂಪನಿ ಸ್ಥಾಪನೆ ಮಾಡಿ , ಆನಂತರ ಕೆಲ ಅಡಚಡೆಣಗಳನ್ನ ಎದುರಿಸಿ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದಾರೆ..

ಸಿನಿಮಾದ ಜರ್ನಿ ಬಗ್ಗೆಯೂ ತಿಳಿಸಿದ ಅವರು ತಾವು ಹಂಸಲೇಖರ ಪರಿಚಯದಿಂದ ಸಿಕ್ಕ ಶಕುಂತಲೆ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿ ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಔಟ್ ಆಯ್ತು.. ಆದ್ರೂ ಹಠ ಬಿಡದೇ ಸಿನಿಮಾ ಮಾಡಲೇಬೇಕೆಂಬ ಛಲದಲ್ಲಿ ಮನಸ್ಮಿತ ಸಿನಿಮಾ ಮಾಡೋದಕ್ಕೆ ಮುಂದಾದೆವು… ಮನಸ್ಮಿತ ಕಥೆ ಬರೆದು ನಿರ್ದೇಶನ ಮಾಡಿ ಸಿನಿಮಾ ಮುಗಿಸಿದ್ದೇವೆ.. ಜೂನ್ 3 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಮನಸ್ಮಿತ ಜರ್ನಿ ಹಾಗೂ ತಮ್ಮ ಸಿನಿಮಾ ಹಾದಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಿನಿಮಾದ ಹಾಡುಗಳಿಗೆ ಯೂಟ್ಯೂಬ್ ನಲ್ಲಿ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ… ಸಿನಿ ಪ್ರಿಯರು ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ..

Leave a Reply

Your email address will not be published. Required fields are marked *