ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ: ಅಡುಗೆ ಪಾತ್ರೆಗಳಲ್ಲಿ ಸಾಗಿಸ್ತಿದ್ದ 46.799 ಕೆಜಿ ಡ್ರಗ್ಸ್ ಜಪ್ತಿ

ಅಪರಾಧ

ಬೆಂಗಳೂರು: ಬೆಂಗಳೂರು ಕಸ್ಟಮ್ಸ್ ಏರ್ ಕಾರ್ಗೋ ಇಂಟೆಲಿಜೆನ್ಸಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಆಸ್ಟ್ರೇಲಿಯಾಗೆ ರಪ್ತು ಮಾಡ ಲಾಗ್ತಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳು ಅಡುಗೆ ಪಾತ್ರೆಯಲ್ಲಿ ಮಾದಕ ವಸ್ತುಗಳನ್ನು ಸಾಗಿಸಲು ಮುಂದಾಗಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಡುಗೆ ಮನೆಯಲ್ಲಿ ಬಳಸೋ ಬಾಕ್ಸ್ಗಳು, ಪಾತ್ರೆಗಳು, ಕ್ಯಾರಿಯರ್ಗಳಲ್ಲಿ ಮಾದಕ ವಸ್ತುಗಳನ್ನು ತುಂಬಿ ಸಾಗಿಸಲಾಗ್ತಿತ್ತು.ಆಸ್ಟ್ರೇಲಿಯಾಕ್ಕೆ ರಪ್ತು ಮಾಡಲು ಯತ್ನಿಸಿದ್ದ 9 ಕೋಟಿ 23 ಲಕ್ಷ ಮೌಲ್ಯದ ಮಾದಕ ವಸ್ತು ಎಫೆಡ್ರಿನ್ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 46.799 ಕೆಜಿಯ ಎಫೆಡ್ರನ್ ಮಾದಕ ವಸ್ತು ಬರೋಬ್ಬರಿ 9 ಕೋಟಿ 23 ಲಕ್ಷ ಮೌಲ್ಯದ್ದಾಗಿದೆ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿರೋ ಕಸ್ಟಮ್ಸ್ ಅಧಿಕಾರಿಗಳು NDPS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *