Rajinikanth.. ಜೀವನದಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲ ಎಂದ ಸೂಪರ್ ಸ್ಟಾರ್..! ಏನಾಯ್ತು ತಲೈವಾ ಜೀವನದಲ್ಲಿ?

ಚಲನಚಿತ್ರ

ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ವಯಸ್ಸು 71 ಆದ್ದರು. ಚಿತ್ರರಂಗದಲ್ಲಿ ಇವರ ಮೇಲಿರುವ ಕ್ರೇಜ್ ಒಂದಚೂರು ಕಡಿಮೆಯಾಗಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟನ ಬದುಕಿನಲ್ಲಿ 10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲ ಅಂತಾ ಇತ್ತೀಚಿನ ಸಂದರ್ಶನವೊಂದರಲ್ಲಿ ರಜನೀಕಾಂತ್ ಹೇಳಿರುವುದು ಇದೀಗ ಸಖತ್ ವೈರಲ್ ಆಗಿದೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ಕಾಲ್‌ಶೀಟ್‌ಗಾಗಿ ಕಾದು ಕೂರುವವರಿದ್ದಾರೆ. ಹಣ, ಆಸ್ತಿ, ಕೀರ್ತಿ ಜತೆಗೆ ಸಾಕು ಅನ್ನೋವಷ್ಟು ಸಿನಿಮಾ ಅವಕಾಶಗಳಿದ್ದರು. ರಜನೀಕಾಂತ್ ವೈಯಕ್ತಿಕ ಜೀವನದಲ್ಲಿ ಕಿಂಚಿಂತೂ ನೆಮ್ಮದಿ ಇಲ್ಲವಂತೆ. ಹಾಗಂತ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ 10 ಪರ್ಸೆಂಟ್‌ನಷ್ಟು ನೆಮ್ಮದಿ ಇಲ್ಲಾ ಅಂತಾ ಹೇಳಿಕೊಂಡಿದ್ದಾರೆ. ಐಶ್ವರ್ಯ ಮತ್ತು ಧನುಷ್ ಡಿವೋರ್ಸ್ ನಂತರ ರಜನೀಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು,

ಮಗಳ ಡಿವೋರ್ಸ್ ಮನಸ್ಸಿಗೆ ಮತ್ತಷ್ಟು ಘಾಸಿ ಮಾಡಿದ್ಯಾ, ಎಲ್ಲಾ ಇದ್ದು ಮಕ್ಕಳ ಜೀವನ ಹಳಿ ದಾಟಿ ಹೋಗಿರುವುದು ರಜನಿಕಾಂತ್ ಆರೋಗ್ಯಕ್ಕೆ ಮತ್ತಷ್ಟು ಘಾಸಿ ಮಾಡಿದ್ಯ ಅಂತಾ ಅಭಿಮಾನಿಗಳ ವಲಯದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಮಕ್ಕಳ ಜೀವನವೇ ಮನಸ್ಸಿನಲ್ಲಿಕೊಂಡು ಈ ಮಾತು ಹೇಳಿದ್ರಾ ರಜನಿಕಾಂತ್. ಒಟ್ನಲ್ಲಿ ಸಕ್ಸಸ್‌ಫುಲ್ ಆಕ್ಟರ್ ಆಗಿದ್ದರು. ಖುಷಿ, ನೆಮ್ಮದಿ ಇಲ್ಲದೇ ಬದುಕುವುದು ಕಷ್ಟ. ನೆಚ್ಚಿನ ನಟನ ಈ ಕಾಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *