ಇಂದು ಧರ್ಮಗಳ ಮೇಲೆಯೇ ಚುನಾವಣೆ ನಡೆಸುವಂತಾಗಿದೆ: ಶಾಸಕ ರಾಜೇಗೌಡ

ಬೆಂಗಳೂರು

ಬೆಂಗಳೂರು: ಇಂದು ಧರ್ಮಗಳ ಮೇಲೆಯೇ ಚುನಾವಣೆ ನಡೆಸುವಂತಾಗಿದೆ ಎಂದು ಶಾಸಕ ರಾಜೇಗೌಡ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವವರು ಪ್ರಾಮಾಣಿಕರಿರಬೇಕು. ಆದರೆ, ಇಂದು ಅಂತಹ ಸನ್ನಿವೇಶ ಕಾಣ್ತಿಲ್ಲ. ಹಣವಿದ್ದವರು ಸದನಕ್ಕೆ ಬರುತ್ತಿದ್ದಾರೆ. ಇಂತಹ ಸನ್ನಿವೇಶ ಇರಬಾರದು. ತಿಳಿದವರು, ಜನಪರ ಕಾಳಜಿಯುಳ್ಳವರು ಬರಬೇಕು. ಜನರು ಕೂಡ ಉತ್ತಮರನ್ನು ಆಯ್ಕೆ ಮಾಡಬೇಕು. ಫಂಡ್‌ ಮಾಡುವವರು ಲಾಭ ಇಟ್ಟುಕೊಂಡೇ ಇರುತ್ತಾರೆ. ಮುಂದೆ ಲಾಭ ಪಡೆಯುವ ಉದ್ದೇಶವಿರುತ್ತೆ. ಹಾಗಾಗಿ, ಇಂತಹದಕ್ಕೂ ‌ಬ್ರೇಕ್ ಹಾಕಬೇಕು. ಇಂದು ಧರ್ಮಗಳನ್ನು ಒಡೆಯುವ ಕೆಲಸವಾಗ್ತಿದೆ. ಇದರ ಮೇಲೆಯೇ ಚುನಾವಣೆ ನಡೆಸುವಂತಾಗಿದೆ. ಇಂತಹದ್ದಕ್ಕೆ ಶಾಶ್ವತ ಕಡಿವಾಣ ಹಾಕಬೇಕು. ರಾಜ್ಯದ ಅಭಿವೃದ್ಧಿ, ಜನರ ಅಭಿವೃದ್ಧಿ ಮುಖ್ಯವಾಗಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *