ಬೆಂಗಳೂರು- ಒಂದು ಸಿನಿಮಾಗಾಗಿ 16 ವರ್ಷ ಸವೆಸೋಕೆ ಆಗುತ್ತಾ..? ಖಂಡಿತಾವಾಗಿಯೂ ಹೌದು ಎನ್ನುತ್ತಲೇ ‘GoatLife’ ಪ್ರೇಕ್ಷಕರ ಮನಸ್ಸುಗಳನ್ನ ಕದಿಯುತ್ತಿದೆ. ಬೆಂಗಳೂರಿನಲ್ಲಿ ಒಳ್ಳೆ ಓಪನಿಂಗ್ ಪಡೆದುಕೊಂಡಿರೋ ‘ಆಡುಜೀವಿತಂ’ ಈ ವರ್ಷದ ಹಿಟ್ ಲಿಸ್ಟ್ ಗೆ ಸೇರೊ ಮುನ್ಸೂಚನೆ ಕೊಡ್ತಿದೆ. ಟ್ರೈಲರ್ ನಲ್ಲೇ ಪ್ರೇಕ್ಷಕರಿಗೆ ಒಂದು ರಿಯಾಲಿಸ್ಟಿಕ್ ಫೀಲ್ ಕೊಟ್ಟ ‘ಆಡುಜೀವಿತಂ’, ಚಿತ್ರಮಂದಿರಗಳಲ್ಲೂ ತನ್ನ ಆಟ ಶುರುಹಚ್ಚಿಕೊಳ್ತಿದೆ. ಇಂದು ದೇಶದದ್ಯಾಂತ ಬಿಡುಗಡೆಯಾಗಿರೋ ‘ಆಡುಜೀವಿತಂ’, ಮೊದಲ ದಿನವೇ ಗಲ್ಲಾಪೆಟ್ಟಿಗೆ ದೋಚುತ್ತಿದೆ
ಮಳಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಇಲ್ಲಿ ಗುರುತು ಸಿಗದಷ್ಟು ಬದಲಾಗಿಬಿಟ್ಟಿದ್ದಾರೆ. ಪಾತ್ರಕ್ಕೆ ಜೀವ ತುಂಬೋದ್ರಲ್ಲಿ ಎಲ್ಲೂ ಪೃಥ್ವಿರಾಜ್ ಸೋತಿಲ್ಲ. ಬದಲಾಗಿ ತನ್ನೊಳಗಿನ ಆಕ್ಟರ್ ಎಷ್ಟು ಸಾರ್ಮಥ್ಯಶಾಲಿ ಎಂಬುದನ್ನ ಸಾಬೀತುಪಡಿಸಿದ್ದಾರೆ. ಮರುಭೂಮಿಯಲ್ಲಿ ಓಡಾಡುತ್ತ ಜೀವನೆಲೆ ಕಂಡುಹಿಡಿಯೋ ಆ ಪಾತ್ರವನ್ನ ತಾವೇ ಪೃಥ್ವಿರಾಜ್ ಅನುಭವಿಸಿದ್ದಾರೆ. ಪಾತ್ರಕ್ಕಾಗಿ ಪೃಥ್ವಿ ತಯಾರಾದ ರೀತಿ ಪ್ರೇಕ್ಷಕರನ್ನ ಮ್ಮೆ ದಂಗುಬಡಿಸುತ್ತೆ. ಪೃಥ್ವಿ ಸಿನಿಜರ್ನಿಯ ಚಾಪ್ಟರ್ ನಲ್ಲಿ ‘ಆಡುಜೀವಿತಂ’ ಯಾವಾಗಲೂ ವಿಶೇಷವೇ ಎಂಬುದು ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.
ಪೃಥ್ವಿರಾಜ್ ಜೊತೆ ಅಮಲಾಪೌಲ್, ಜಿಮ್ಮಿಜೀನ್, ಕೆ.ಆರ್.ಗೋಕುಲ್ ಕೊಟ್ಟ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಚಿತ್ರಮಂದಿರಗಳಿಂದ ಹೊರಬಂದಮೇಲೂ ಕಾಡದೇ ಇರದು. ಸಿನಿಮಾ ಬಿಡುಗಡೆಗೂ ಮುಂಚೆ ತಾನು ಮಾತನಾಡಬಾರದು ಸಿನಿಮಾನೇ ಮಾತನಾಡಬೇಕು ಎಂದಿದ್ದ ನಿರ್ದೇಶಕ ಬ್ಲೆಸ್ಲಿ, ಆ ಮಾತುಗಳನ್ನ ಸಿನಿಮಾಟಿಕ್ ಆಗಿಯೂ ನಿಜವಾಗಿಸ್ತಾರೆ. ಫಸ್ಟ್ ಡೇ ಫಸ್ಟ್ ಶೋನಲ್ಲೇ ಒಂದು ದೊಡ್ಡ ಪ್ರೇಕ್ಷಕವರ್ಗಕ್ಕೆ ‘ಆಡುಜೀವಿತಂ’, ರೀಚ್ ಆಗಿ ಮುನ್ನುಗುತ್ತಿದೆ.
ಥಿಯೆಟರ್ ಗಳಲ್ಲಿ ಒಂದೊಳ್ಳೆ ರಿಯಾಕ್ಷನ್ ಪಡೆದುಕೊಳ್ತಿರೋ ‘ಆಡುಜೀವಿತಂ’, ಸಾಮಾಜಿಕ ಜಾಲತಾಣದ ಹಾಟ್ ಟಾಪಿಕ್ ಆಗ್ತಿದೆ. ದಯವಿಟ್ಟು ಇಂತಹ ಮಾಸ್ಟರ್ ಪೀಸ್ ಕಥೆಗಳನ್ನ ಕೈ ಬಿಡಬೇಡಿ ಎನ್ನುತ್ತಲೇ ನೆಟ್ಟಿಗರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದಾರೆ. ಪೃಥ್ವಿಗೆ ಈ ಸಿನಿಮಾದ ನಟನೆಗೆ ನ್ಯಾಷನಲ್ ಅರ್ವಾಡ್ ಬರಲೇಬೇಕು ಅಂತ ಕೆಲವರು ಚಪ್ಪಾಳೆ ತಟ್ಟಿದ್ದಾರೆ. ಸೌತ್ ಸಿನಿಮಾ ದಿಗ್ಗಜರಾದ ಕಮಲ್ ಹಾಸನ್, ಮೋಹನ್ ಲಾಲ್ ಕೂಡ ಸಿನಿಮಾವನ್ನ ಮುಕ್ತಕಂಠದಿಂದ ಹೊಗಳಿದ್ದಾರೆ. ಭಾರತದಲ್ಲಿ ಪ್ಯಾನ್ ಇಂಡಿಯನ್ ಬಿಡುಗಡೆಯಾಗಿರೋ ‘GoatLife’ ಮೊದಲ ದಿನವೇ 8 ಕೋಟಿ ಕಲೆಕ್ಷನ್ ಮಾಡೋ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕಾದಂಬರಿ ಆಧಾರಿತ ಚಿತ್ರಗಳು ಕರ್ಮಾಶಿಯಲ್ ಆಗಿ ಸೌಂಡ್ ಮಾಡಬಹುದು ಎಂಬುದಕ್ಕೆ ‘ಆಡುಜೀವಿತಂ 2024ರ ಮೊದಲಸಾಕ್ಷಿ..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ