ಬೆಂಗಳೂರು: ಡಿಸಿಎಂ ಹಾಗೂ 5 ಮಂದಿ ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಕೊನೆಗೂ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ಲಕ್ಕಿ ನಿವಾಸವೆಂದು ಅದೇ ನಿವಾಸವನ್ನು ಈಗ ಹಾಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದ ನಿವಾಸವನ್ನೇ ಪಡೆದ ಡಿ.ಕೆ.ಶಿವಕುಮಾರ್. ಬೆಂಗಳುರಿನ ಗಾಂಧಿ ಭವನ ರಸ್ತೆಯಲ್ಲಿರುವ ಕುಮಾರಕೃಪ ನಿವಾಸ ಪಡೆದುಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ. ಜ್ಯೋತಿಷಿಗಳ ಸಲಹೆ ಪಡೆದು ಸಿಎಂ ಸಿದ್ದರಾಮಯ್ಯ ನಿವಾಸವಿದ್ದ ಕುಮಾರಕೃಪಾಗೆ ಶಿಫ್ಟ್ ಆಗಿರುವ ಕನಕಪುರ ಬಂಡೆ.
ಅಂದ ಹಾಗೆ ಇನ್ನುಳಿದ ಐವರು ನೂತನ ಸಚಿವರು ರೇಸ್ ವ್ಯೂ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಪಡೆದ ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ ಹಾಗೆ ಸದಾಶಿವನಗರದ ಸರ್ಕಾರಿ ನಿವಾಸವನ್ನು ಡಾ.ಜಿ ಪರಮೇಶ್ವರ್ ಗೆ ನಿವಾಸ ಹಂಚಿಕೆಯಾಗಿ ನೀಡಲಾಗಿದೆ