ಧರ್ಮದ ಹೆಸರಿನಲ್ಲಿ ಪಾಕಿಸ್ಥಾನದ ಅಲ್ಪಸಂಖ್ಯಾಕರು ಹಿಂಸೆಗೆ ಒಳಗಾಗುತ್ತಿದ್ದಾರೆ. ಅವರನ್ನು ರಕ್ಷಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಪಾಕಿಸ್ಥಾನದ ರಕ್ಷಣ ಸಚಿವ ಖ್ವಾಜಾ ಆಸಿಫ್ ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ಥಾನದ ಸಂಸತ್ನಲ್ಲಿ ಮಾತನಾಡಿದ ಅವರು, ದಿನೇದಿನೆ ಅಲ್ಪಸಂಖ್ಯಾಕರನ್ನು ಹತ್ಯೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ಸಣ್ಣ ಪಂಗಡಗಳೂ ಸೇರಿದಂತೆ ಪಾಕಿಸ್ಥಾನದಲ್ಲಿ ಯಾವುದೇ ಅಲ್ಪಸಂಖ್ಯಾಕರು ಸುರಕ್ಷಿತವಾಗಿಲ್ಲ. ಇದು ದೇಶಕ್ಕೆ ಮಜು ಗರದ ವಿಚಾರ ವಾಗಿದೆ. ಸಂತ್ರಸ್ತರು ಧರ್ಮನಿಂದನೆ ಮಾಡದಿದ್ದರೂ, ಅವರ ಮೇಲೆ ಅಂಥ ಆರೋಪ ಹೊರಿಸಿ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಕೊಲ್ಲಲಾಗುತ್ತದೆ ಎಂದು ವಿಷಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಅಲ್ಪ ಸಂಖ್ಯಾತರ ರಕ್ಷಣೆಗೆ ಮಸೂದೆ ರೂಪಿಸಬೇಕಿದೆ ಎಂದು ಹೇಳಿದ್ದಾರೆ.