ತಮ್ಮದೇ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ಯುವರಾಜ್ ಕುಮಾರ್ (Yuvaraj Kumar) ಅವರನ್ನು ಲಾಂಚ್ ಮಾಡುವ ಆಲೋಚನೆ ಮಾಡಿದ್ದರಂತೆ ಪುನೀತ್ ರಾಜ್ ಕುಮಾರ್(Puneeth Rajkumar). ಒಂದಷ್ಟು ಕಥೆಗಳನ್ನು ಅಪ್ಪು ಕೇಳಿದ್ದರಂತೆ. ಆದರೆ, ಅದು ಸಾಧ್ಯವಾಗಲಿಲ್ಲ. ಹಾಗಂತ ಪಿ.ಆರ್.ಕೆ ಪ್ರೊಡಕ್ಷನ್ ಸುಮ್ಮನೆ ಕೂತಿಲ್ಲ. ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ನಟನೆಯ ಸಿನಿಮಾವನ್ನು ಮಾಡುವುದಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್, ‘ಯುವ ಡೇಟ್ ಕೊಟ್ಟರೆ ಕಂಡಿತವಾಗಿಯೂ ಅವರ ಸಿನಿಮಾ ಮಾಡುತ್ತೇನೆ. ಅವರು ಡೇಟ್ ಕೊಡಬೇಕು ಅಷ್ಟೆ’ ಅಂದಿದ್ದಾರೆ. ಈ ಮೂಲಕ ಪಿ.ಆರ್.ಕೆ ಬ್ಯಾನರ್ (P.R.K Production) ಅಡಿಯಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದಲ್ಲೇ ಅತೀ ಹೆಚ್ಚು ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಮಾಡಿದವರು ಡಾ.ರಾಜ್ ಕುಮಾರ್. ಈ ಕಾದಂಬರಿಗಳ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ (Parvathamma) ಶ್ರಮ ಹೆಚ್ಚಿತ್ತು. ಸ್ವತಃ ಪಾರ್ವತಮ್ಮನವರೇ ಕಾದಂಬರಿಗಳನ್ನು ಓದಿ ಸಿನಿಮಾ ಮಾಡುವಂತೆ ಪತಿ ರಾಜ್ ಕುಮಾರ್ ಅವರಿಗೆ ಸಲಹೆ ನೀಡುತ್ತಿದ್ದರು. ಕಾದಂಬರಿ (Novel) ಆಧರಿಸಿದ ಸಿನಿಮಾಗಳಲ್ಲಿ ನಟಿಸುವಂತೆ ಮಕ್ಕಳಿಗೂ ಪಾರ್ವತಮ್ಮನವರು ಸಲಹೆ ನೀಡುತ್ತಿದ್ದರು.