PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಸ್ಕಾಟ್ಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಪಾಕ್ ಮೂಲದ ಹಂಝಾ ಯೂಸುಫ್‌ ನೇಮಕ

March 29, 2023

ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್

March 29, 2023

Code Of conduct: ಮಾಜಿ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘಿಸಿದ್ರಾ?! ಏನ್ ಹೇಳಿದ್ರು ಸಿದ್ದು!

March 29, 2023
Facebook Twitter Instagram
Thursday, March 30
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌
ಬೆಂಗಳೂರು Prajatv KannadaBy Prajatv KannadaMarch 15, 2023

ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಬೆಂಗಳೂರು: ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಬೆಳ್ತಂಗಡಿಯ ರಾಜ ಕೇಸರಿ ಟ್ರಸ್ಟ್‌ (Raja Kesari Trust Belthangady) ಒಂದು ಉತ್ತಮ ಉದಾಹರಣೆ.

ಬಡವರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಕಾರಣಕ್ಕೆ ದಿನಗೂಲಿ ನೌಕರರಿಂದಲೇ ರಾಜ ಕೇಸರಿ ಟ್ರಸ್ಟ್‌ ರಚನೆಯಾಗಿದೆ. 2012 ರಲ್ಲಿ ಆರಂಭಗೊಂಡ ಟ್ರಸ್ಟ್‌ ಇಲ್ಲಿಯವರೆಗೆ 2 ಕೋಟಿಗೂ ಅಧಿಕ ಮೊತ್ತದ ಸೇವಾ ಚಟುವಟಿಕೆಯನ್ನು (Social Service) ರೂಪಿಸಿದೆ.

ತುಳುನಾಡಿನ ದೈವ ದೇವರ ಆಶೀರ್ವಾದದಿಂದ ಕಡುಬಡವರಿಗೆ ಸೇವೆ ಉದ್ದೇಶದಿಂದ ದೀಪಕ್‌.ಜಿ ಅವರು ಈ ಟ್ರಸ್ಟ್‌ ಆರಂಭಿಸಿದ್ದಾರೆ. ಚಾಲಕರು, ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಸೇರಿದಂತೆ ದಿನಗೂಲಿ ನೌಕರರು ಈ ಟ್ರಸ್ಟ್‌ ಸದಸ್ಯರಾಗಿದ್ದಾರೆ.

ಟ್ರಸ್ಟ್‌ ಏನು ಕೆಲಸ ಮಾಡಿದೆ?
ಸಂಘಟನೆಯಿಂದ 34 ಮನೆಗಳನ್ನು ನಿರ್ಮಾಣ ಮಾಡಿದ್ದು, ತುರ್ತು ಸಂದರ್ಭದಲ್ಲಿ 12 ಸಾವಿರಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದ್ದಾರೆ. ಕೋವಿಡ್‌ ಸಮಯದಲ್ಲಿ ಆಹಾರ ಕಿಟ್‌ ವಿತರಣೆ, ಕೊರೊನಾ ಸಮಯದಲ್ಲಿ ಮೃತಪಟ್ಟ 85 ವ್ಯಕ್ತಿಗಳ ಶವ ಸಂಸ್ಕಾರ ಮಾಡಲಾಗಿದೆ.

ಎಂಡೋಸಲ್ಫಾನ್ ಮತ್ತು ಅಂಗವಿಕಲರ ವ್ಯಕ್ತಿಗಳಿಗೆ 21 ವೀಲ್‌ ಚೇರ್‌ ಹಸ್ತಾಂತರ, ಮುಕ್ತಿ ಧಾಮಕ್ಕೆ ಕಟ್ಟಿಗೆ ವ್ಯವಸ್ಥೆ. ಅಶಕ್ತ ಕುಟುಂಬಗಳಿಗೆ ಟೈಲರಿಂಗ್‌ ಯಂತ್ರವನ್ನು ಹಸ್ತಾಂತರಿಸಲಾಗಿದೆ.

ಇಷ್ಟೇ ಅಲ್ಲದೇ ಅನಾಥಾಶ್ರಮಗಳಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ, ಗ್ರಾಮಾಂತರ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತಿದೆ. ಅಂಗವಿಕಲರ ಕಲ್ಯಾಣ ಕಾರ್ಯಕ್ರಮ. ಕ್ರೀಡೆ, ಕಲೆ, ಸಂಸ್ಕೃತಿ ಬಗ್ಗೆ ಜಾಗೃತಿ, ಶಿಕ್ಷಣಕ್ಕೆ ಪ್ರೋತ್ಸಾಹ, ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ಬಸ್ಸು ತಂಗುದಾಣದಲ್ಲಿ ನೀರಿನ ಬಾಟಲಿಯನ್ನು ಮಾರಿ ಅಶಕಕ್ತರಿಗೆ ಆರ್ಥಿಕ ನೆರವು ನೀಡಿತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ, ಆಶ್ರಮಗಳಿಗೆ ವಿಶೇಷ ಯೋಜನೆ, ನ್ಯಾಯ ಬೆಲೆ ಅಂಗಡಿಯಲ್ಲಿ ಸ್ವಯಂ ಸೇವಕರಾಗಿ ಟ್ರಸ್ಟ್‌ ಸದಸ್ಯರು ಕೆಲಸ ನಿರ್ವಹಣೆ ಮಾಡಿದ್ದಾರೆ.

Share. Facebook Twitter WhatsApp Pinterest LinkedIn Tumblr Telegram Email

Related Posts

“ಮತ್ತೆ ಘರ್ಜಿಸಲಿದೆ ಕರ್ನಾಟಕ”: ಹೊಸ ಕ್ಯಾಂಪೇನ್ ಲೋಗೊ ಬಿಡುಗಡೆ ಮಾಡಿದ ಕಾಂಗ್ರೆಸ್

March 29, 2023

Karnataka Assembly Election: ಕರ್ನಾಟಕ ಮತಹಬ್ಬಕ್ಕೆ ಮುಹೂರ್ತ ಫಿಕ್ಸ್..! ಮೇ 10 ಕ್ಕೆ ಮತದಾನ, 13ಕ್ಕೆ ಫಲಿತಾಂಶ

March 29, 2023

ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪ ಶುದ್ಧ ಸುಳ್ಳು: ಸಚಿವ ಬೈರತಿ‌ ಬಸವರಾಜ್

March 29, 2023

Bangalore: ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್’ಗೆ ED ಶಾಕ್..!

March 29, 2023

JDS ಸರಕಾರ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ 50% ಸಬ್ಸಿಡಿ: ಹೆಚ್.ಡಿ.ಕುಮಾರಸ್ವಾಮಿ ಘೋಷಣೆ

March 29, 2023

Bangalore: ಹನಿ ಟ್ರ್ಯಾಪ್ ಮೂಲಕ ಸುಲಿಗೆ ಮಾಡುತಿದ್ದ ಆರೋಪಿಗಳು ಪೊಲೀಸರ ಅತಿಥಿ

March 29, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.