ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನುಂಗಲಾರದ ತುತ್ತಾಗಿದೆ. ಹೊಸ ಜೈಲಿಗೆ ಅಡ್ಜಸ್ಟ್ ಆಗಲು ಪರದಾಡುತ್ತಿರುವ ದರ್ಶನ್ ಗೆ ಪೊಲೀಸ್ ಸಿಬ್ಬಂದಿ ಪದೇ ಪದೇ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರು ಪೊಲೀಸರು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಸುವ ತಯಾರಿ ನಡೆಸುತ್ತಿದ್ದು ಇದರ ಬಗ್ಗೆ ಮಾಹಿತಿ ಪಡೆಯಲು ದರ್ಶನ್ ರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತಮಗೆ ಟಿವಿ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಟಿವಿಯ ಅವಶ್ಯಕತೆ ಇದೆ ಎಂದಾದರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಹೈ-ಸೆಕ್ಯುರಿಟಿ ಸೆಲ್ಗೆ ಊಟ ನೀಡುವ ವೇಳೆ ಈ ಮಾತುಕತೆ ನಡೆದಿದೆ. ಅಚ್ಚರಿ ಏನೆಂದರೆ, ಟಿವಿ ವಿಚಾರ ತೆಗೆಯುತ್ತಿದಂತೆಯೇ ಅದರ ಸಹವಾಸವೇ ಬೇಡ ಎನ್ನುವ ರೀತಿ ದರ್ಶನ್ ಸೈಲೆಂಟ್ ಆದರು ಎಂಬ ಮಾಹಿತಿ ಸಿಕ್ಕಿದೆ.
ದರ್ಶನ್ ಅವರು ಸದ್ಯಕ್ಕೆ ಟಿವಿ ಬೇಕು ಎಂಬ ಬೇಡಿಕೆ ಇಟ್ಟಿಲ್ಲ. ಯೋಗ, ವಾಕ್ ಹಾಗೂ ಪುಸ್ತಕದ ಕಡೆಗೆ ಮಾತ್ರ ಅವರು ಗಮನ ಹರಿಸುತ್ತಿದ್ದಾರೆ. ದರ್ಶನ್ ಇರುವ ಅಕ್ಕಪಕ್ಕದ ಸೆಲ್ಗಳು ಖಾಲಿ ಆಗಿವೆ. ಆ ಕಾರಣದಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅಕ್ಷರಶಃ ಏಕಾಂಗಿ ಆಗಿದ್ದು ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದಾಸ ಸಂಪೂರ್ಣ ಏಕಾಂಗಿ ಆಗಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ತಮ್ಮ ಪ್ರಭಾವ ಬಳಸಿ ಹಲವು ಸೌಕರ್ಯ ಪಡೆದುಕೊಂಡಿದ್ದ ದರ್ಶನ್ ಗೆ ಬಳ್ಳಾರಿ ಜೈಲು ನರಕವಾಗಿದೆ. ಮೆಡಿಕಲ್ ರಿಪೋರ್ಟ್ ಇದ್ದರೂ ಸರ್ಜಿಕಲ್ ಚೇರ್ ಪಡೆಯಲು ಮೂರು ದಿನ ಪಡೆ ಮೂರು ದಿನ ಪರದಾಡಬೇಕಾಯಿತು.