PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಓಲಾ ಶೇರಿಂಗ್, ಉಬರ್ ಪೂಲಿಂಗ್‌ʼಗೆ ಅವಕಾಶ ನೀಡಲು ಸಂಸದರ ಪಟ್ಟು: ಕೆರಳಿದ ಖಾಸಗಿ ಸಾರಿಗೆ ಚಾಲಕರು

October 2, 2023

BMTC ನೌಕರರಿಗೆ ಗುಡ್ ನ್ಯೂಸ್: ಡಿಪೋಗಳಲ್ಲೇ ಊಟ ತಿಂಡಿ ಒದಗಿಸುವ ಕ್ಯಾಂಟೀನ್‌ ಆರಂಭ!

October 2, 2023

ಗಾಂಧಿಜೀ ಅವರ ಕನಸಾದ ಸ್ವಚ್ಛ ಭಾರತ ಕನಸನ್ನ ನನಸು ಮಾಡಬೇಕಿದೆ: ಗ್ರಾ.ಪಂ.ಅಧ್ಯಕ್ಷ ಅಶೋಕ್

October 2, 2023
Facebook Twitter Instagram
Monday, October 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನೀರು ನಿಂತಿದ್ದಕ್ಕೆ ಪ್ರತಾಪ್‌ ಸಿಂಹ ಹೇಳಿದ್ದೇನು?
ಜಿಲ್ಲೆ Prajatv KannadaBy Prajatv KannadaMarch 19, 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನೀರು ನಿಂತಿದ್ದಕ್ಕೆ ಪ್ರತಾಪ್‌ ಸಿಂಹ ಹೇಳಿದ್ದೇನು?

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ರಾಮನಗರ: ಕಳೆದ ವರ್ಷದ ಮಳೆಗಾಲದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿರಲಿಲ್ಲ, ರಸ್ತೆಯುದ್ದಕ್ಕೂ ನೀರು ತುಂಬಿ ವಾಹನ ಸಂಚಾರಕ್ಕೆ ಪರದಾಡುವಂತಾಗಿತ್ತು. ಈಗ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಿದೆ, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೂ ಬೇಸಿಗೆಯ ಒಂದೇ ಮಳೆಗೆ ಸೇತುವೆ ಕೆಳಗೆ ನೀರು ತುಂಬಿ ಅಪಘಾತಕ್ಕೂ ಕಾರಣವಾಯಿತು. ಸರಕಾರದ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದ್ದು, ರಸ್ತೆಯಲ್ಲಿ ನೀರು ನಿಲ್ಲಲು ಕಾರಣವೇ ಬೇರೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ರಾಮನಗರದ ಸಂಗಬಸವನದೊಡ್ಡಿಯ ಸಮೀಪದ ಹೆದ್ದಾರಿಯ ಕೆಳಗಿನ ಸೇತುವೆಯಲ್ಲಿ ಮಳೆಯ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುಮಾರು 2 ಅಡಿಗಳಷ್ಟು ನೀರು ನಿಂತಿದ್ದರಿಂದ ವೇಗವಾಗಿ ಬರುತ್ತಿದ್ದ ವಾಹನಗಳು ದಿಢೀರನೆ ಸ್ಪೀಡ್‌ ಕಡಿಮೆ ಮಾಡಿಕೊಳ್ಳುತ್ತಿದ್ದವು. ಇದರಿಂದಾಗಿ ಅಪಘಾತಗಳ ಸಾಧ್ಯತೆ ಹೆಚ್ಚಿತ್ತು ಹಾಗೂ ವಾಹನ ದಟ್ಟಣೆಯು ಉಂಟಾಗಿತ್ತು. ಟೋಲ್‌ ಕಟ್ಟಿಸಿಕೊಂಡು ವ್ಯವಸ್ಥೆ ಸರಿ ಇಲ್ಲವೆಂದು ವಾಹನ ಸವಾರರು ದೂರಿದರು. ರಸ್ತೆಯಲ್ಲಿ ನೀರಿನ ಹರಿವು ಸರಿಪಡಿಸುವ ಕಾರ್ಯಾಚರಣೆಯನ್ನು ಶನಿವಾರ ನಡೆಸಲಾಗಿದೆ.

‘ಓಡಾಡಲು ರಸ್ತೆ ಮಾಡಿಕೊಳ್ಳಲು ಚರಂಡಿಯನ್ನು ಮುಚ್ಚಿರುವುದರಿಂದ ಹೆದ್ದಾರಿಯಲ್ಲಿ ಈಜುಕೊಳ ನಿರ್ಮಾಣವಾದಂತೆ ಆಗಿತ್ತು. ಆ ಜಾಗದಲ್ಲಿ ಎರಡು ಬೃಹತ್‌ ಗಾತ್ರದ ಸಿಮೆಂಟ್‌ ಪೈಪ್‌ಗಳನ್ನು ಹಾಕಿಸುವ ಮೂಲಕ ಸರಿಪಡಿಸಲಾಗಿದೆ” ಎಂದು ಪ್ರತಾಪ್‌ ಸಿಂಹ ವಿಡಿಯೋದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

‘ಗ್ರಾಮಸ್ಥರು ಚರಂಡಿ ಮಾರ್ಗವನ್ನು ಮುಚ್ಚಿದ್ದರಿಂದ ರಸ್ತೆಯಿಂದ ನೀರು ಸರಾಗವಾಗಿ ಹರಿಯಲಾಗದೆ, ರಸ್ತೆಯಲ್ಲಿಯೇ ಮಳೆಯ ನೀರು ಸಂಗ್ರಹವಾಗಿತ್ತು. ಮಾದಾಪುರ ಮತ್ತು ಸುತ್ತಮುತ್ತಲಿನ ಕೆಲವು ಹಳ್ಳಿಗರು ತಮ್ಮ ಕೃಷಿ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ಓಡಾಡಲು ಚರಂಡಿ ಮಾರ್ಗವನ್ನು ಮುಚ್ಚಿ ರಸ್ತೆ ಮಾಡಿಕೊಂಡಿದ್ದರು. ಕಿ.ಮೀ.42+640ರಲ್ಲಿ ಸುಮಾರು 3 ಮೀಟರ್ ಅಗಲ ಮಣ್ಣು ಮುಚ್ಚಿ ದಾರಿ ಮಾಡಿಕೊಂಡಿದ್ದರು. ಸರ್ವೀಸ್‌ ರಸ್ತೆಯಿಂದ ಸಾಗಲು ಈ ಕಾಲು ಮಾಡಿಕೊಳ್ಳಲಾಗಿತ್ತು, ಹಾಗಾಗಿ ರಸ್ತೆಯಲ್ಲಿ ನೀರು ನಿಂತಿತ್ತು’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

KRS ಡ್ಯಾಂ ಗೆ ಪ್ರಮೋದಾದೇವಿ ಒಡೆಯರ್ ಭೇಟಿ: ಡ್ಯಾಂ ಬರಿದಾಗಿರುವುದನ್ನ ಕಂಡು ರಾಜವಂಶಸ್ಥೆ ಬೇಸರ

October 2, 2023

ಹೊಸ ನೀರು ಬರಬೇಕು, ಹಳೆನೀರು ರಿಟೈಡ್ ಆಗಬೇಕು: ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ

October 2, 2023

ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ದ -ಆನಂದ ಸಿಂಗ್

October 2, 2023

ಕಾವೇರಿ ನೀರು ಬಿಟ್ಟಾಗ ಇವರನ್ನು ಕಳ್ಳರು ಅಂದಿದ್ದೆ, ಈಗ ದಡ್ಡರು ಎನ್ನಬೇಕಿದೆ: ಕೆಎಸ್ ಈಶ್ವರಪ್ಪ

October 2, 2023

ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ: ಬಸವರಾಜ ಬೊಮ್ಮಾಯಿ

October 2, 2023

ವಾಲ್ಮೀಕಿ ಪೀಠದ ಶ್ರೀಗೆ ಮಕ್ಕಳಿರುವ ವಿಚಾರ, ಸಚಿವ ಜಾರಕಿಹೊಳಿ ಸ್ಪೋಟಕ ಹೇಳಿಕೆ

October 2, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.