ಮೈತುಂಬಾ ಸಾಲಾ ಮಾಡಿಕೊಂಡಿದ್ದ ಮದ್ಯದ ದೊರೆ ಎಂದೇ ಖ್ಯಾತಿ ಘಳಿಸಿದ ಉದ್ಯಮಿ ವಿಜಯ್ ಮಲ್ಯ ಸದ್ಯ ಲಂಡನ್ ನಲ್ಲಿ ಸೆಟಲ್ ಆಗಿದ್ದಾರೆ. ದಿವಾಳಿಯಿಂದ ಘೋಷಿಸಿ ಭಾರತದಿಂದ ಕಾಲ್ಕಿತ್ತ ವಿಜಯ್ ಮಲ್ಯ ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಸಖತ್ ಅದ್ದೂರಿಯಾಗಿ ಮಾಡಿದ್ದಾರೆ. ಈ ಮಧ್ಯೆ ಭಾರತದಲ್ಲಿ ದಿವಾಳಿ ಎಂದಿರೋ ವಿಜಯ್ ಮಲ್ಯಗೆ ಲಂಡನ್ ನಲ್ಲಿ ಎಷ್ಟು ಆಸ್ತಿ ಇದೆ ಎಂಬ ಹುಡುಕಾಟ ಗೂಗಲ್ ನಲ್ಲಿ ಶುರುವಾಗಿದೆ.
ವಿಜಯ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ ಮತ್ತು ಜಾಸ್ಮಿನ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಇತ್ತೀಚೆಗೆ ಲಂಡನ್ ನಲ್ಲಿರುವ ವಿಜಯ ಮಲ್ಯ ಅವರ 14 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 117 ಕೋಟಿ ಬೆಲೆ ಬಾಳುವ ಭವನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವಿವಾಹಕ್ಕಿಂತ ಹೆಚ್ಚಾಗಿ ಮಲ್ಯ ಅವರ ಎಸ್ಟೇಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ.
ಹರ್ಟ್ಫೋರ್ಡ್ಶೈರ್ನ ಟೆವಿನ್ನ ಸ್ಲೀಪಿ ಹಳ್ಳಿಯ ಲೇಡಿವಾಕ್ ನಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ವಿವಾಹವಾಗಿದ್ದಾರೆ. ವಿಸ್ತಾರವಾದ ಲೇಡಿವಾಕ್ ಎಸ್ಟೇಟ್ ಅನ್ನು ವಿಜಯ್ ಮಲ್ಯ ಅವರು ಭಾರತದಿಂದ ಯುಕೆಗೆ ಪಲಾಯನ ಮಾಡುವ ಕೆಲವೇ ತಿಂಗಳುಗಳ ಮೊದಲು ಅಂದರೆ 2015ರಲ್ಲಿ ಖರೀದಿಸಿದ್ದರು.
68 ವರ್ಷದ ಮಲ್ಟಿ ಮಿಲಿಯನೇರ್ ವಿಜಯ್ ಮಲ್ಯ ಪ್ರಸ್ತುತ ಯುಕೆಯಲ್ಲಿದ್ದಾರೆ. 900 ಕೋಟಿಗೂ ಹೆಚ್ಚು ಸಾಲ ವಂಚನೆ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಈ ಬಗ್ಗೆ ತನಿಖೆ ನಡೆಸುತ್ತಿದೆ.
ವಿಜಯ್ ಮಲ್ಯ ಅವರು ಎಫ್1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರ ತಂದೆ ಆಂಥೋನಿ ಹ್ಯಾಮಿಲ್ಟನ್ ಅವರಿಂದ ಹರ್ಟ್ಫೋರ್ಡ್ಶೈರ್ನಲ್ಲಿರುವ ಲೇಡಿವಾಕ್ ಎಸ್ಟೇಟ್ ಅನ್ನು ಖರೀದಿಸಿದ್ದರು. 2021ರ ರೆಡಿಫ್ ವರದಿಯ ಪ್ರಕಾರ ಸ್ವ-ಘೋಷಿತ ‘ಕಿಂಗ್ ಆಫ್ ಗುಡ್ ಟೈಮ್ಸ್’ ಒಡೆತನದ ಎಲ್ಲಾ ಲಕ್ಷಣಗಳನ್ನು ಈ ಆಸ್ತಿ ಹೊಂದಿದೆ.
ಇಲ್ಲಿರುವ ದೊಡ್ಡ ನಿವಾಸವು 30 ಎಕರೆ ಭೂಮಿಯಲ್ಲಿದೆ. ಮೂರು-ಮನೆಗಳ ಎಸ್ಟೇಟ್ ಅನೇಕ ಔಟ್ಹೌಸ್ಗಳು, ಈಜುಕೊಳಗಳು, ಕಾರಂಜಿಗಳು ಮತ್ತು ಟೆನ್ನಿಸ್ ಕೋರ್ಟ್ಗಳನ್ನು ಹೊಂದಿದೆ. ಜೊತೆಗೆ ಮಲ್ಯ ಅವರ ದುಬಾರಿ ಕಾರುಗಳ ದೊಡ್ಡ ಫ್ಲೀಟ್ ಅನ್ನು ನಿರ್ವಹಿಸಲು ಸಮರ್ಥವಾಗಿರುವ ಗ್ಯಾರೇಜ್ ಅನ್ನು ಒಳಗೊಂಡಿದೆ.
ಮಲ್ಯ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ಅನಂತರ ಬಿಲ್ಡರ್ಗಳು, ವಾಸ್ತುಶಿಲ್ಪಿಗಳು, ಡೆಕೋರೇಟರ್ಗಳು ಮತ್ತು ಲ್ಯಾಂಡ್ಸ್ಕೇಪ್ ಕಲಾವಿದರ ನಿರಂತರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇವರ ಈ ಎಸ್ಟೇಟ್ ಹಲವು ಸಿಸಿಟಿವಿ ಕೆಮರಾಗಳು, ಕಬ್ಬಿಣದ ಗೇಟ್ ಮತ್ತು ಬಹು ಭದ್ರತಾ ಸಿಬ್ಬಂದಿಗಳೊಂದಿಗೆ ಹೆಚ್ಚು ಕಾವಲುಗಾರರನ್ನು ನೇಮಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ಮಲ್ಯ ಕುಟುಂಬ ಇಲ್ಲಿಗೆ ಬರುವಾಗ ತಮ್ಮೊಂದಿಗೆ ಹೆಚ್ಚಿನ ಸಂಖ್ಯೆಯ ಕಾರುಗಳು ಮತ್ತು ಸಿಬ್ಬಂದಿಯನ್ನು ಕರೆತಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.