ತನಗಿಂತ 15 ವರ್ಷ ಕಿರಿಯನ ಕೈ ಹಿಡಿತಾರಾ ಮಾಜಿ ವಿಶ್ವ ಸುಂದರಿ
ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ವಿಚಾರದಲ್ಲಿ ಆಗಾಗ ಸದ್ದು ಮಾಡುತ್ತಲೆ ಇರುತ್ತಾರೆ.
ಸುಶ್ಮಿತಾ ಸೇನ್ ಹೆಸರು ಈಗಾಗಲೇ ಸಾಕಷ್ಟು ಮಂದಿಯೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಅದ್ಯಾವುದಕ್ಕೂ ನಟಿ ಕ್ಯಾರೆ ಎಂದಿಲ್ಲ.
ಸುಶ್ಮಿತಾ ಕಳೆದ ಕೆಲ ವರ್ಷಗಳಿಂದ ರೋಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಆದರೆ ಮದುವೆಯಾಗುತ್ತಾರೆ ಎನ್ನುವ ಮಾತನ್ನು ಸುಶ್ಮಿತಾ ನಿರಾಕರಿಸಿದ್ದರು.
ಇದೀಗ ಸುಶ್ಮಿತಾ ಮತ್ತೆ ರೋಹ್ಮನ್ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸುಶ್ಮಿತಾ ಸೇನ್ ತನಗಿಂತ 15 ವರ್ಷ ಕಿರಿಯ ಗೆಳೆಯ ರೋಹ್ಮನ್ ಶಾಲ್ ಜೊತೆ ಮದುವೆಯಾಗ್ತಾರಾ ಎಂಬ ಪ್ರಶ್ನೆಗೆ ಸುಶ್ಮಿತಾ ಸೇನ್ ಉತ್ತರಿಸಿದ್ದಾರೆ.
ಎಲ್ಲರೂ ನಾನು ಮದುವೆಯಾಗಬೇಕೆಂದು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ಈ ವಯಸ್ಸಿನಲ್ಲಿ ನಾನು ಜೀವನದಲ್ಲಿ ಸೆಟ್ಲ್ ಆಗ್ಬೇಕು ಎಂದು ಭಾವಿಸುತ್ತೀರಿ. ಆದರೆ ನಾನು ಮದುವೆ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ.
ಮದುವೆಯ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ನಾನು ಮದುವೆಯಾಗುವುದಿಲ್ಲ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.
ನಾನು ಒಡನಾಟ ಮತ್ತು ಸ್ನೇಹವನ್ನು ಹೆಚ್ಚು ನಂಬುತ್ತೇನೆ. ಈ ಎರಡೂ ಇದ್ದರೆ ಮಾತ್ರ ಮದುವೆ ಉಳಿಯುತ್ತದೆ. ಗೌರವ ಮತ್ತು ಸ್ನೇಹ ಬಹಳ ಮುಖ್ಯ ಹಾಗೇ ಸ್ವಾತಂತ್ರ್ಯವೂ ಬಹಳ ಮುಖ್ಯ. ನಾನು ನನ್ನ ಸ್ವಾತಂತ್ರ್ಯವನ್ನು ಹೆಚ್ಚು ಪ್ರೀತಿಸುತ್ತೇನೆ ಎಂದಿದ್ದಾರೆ.