ಅಮರಾವತಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ವಂಚಿಸಿದ ಆರೋಪದ ಮೇಲೆ ಶಿಕ್ಷಕನನ್ನು (Teacher) ಬಂಧಿಸಿದ (Arrest) ಘಟನೆ ಆಂಧ್ರಪ್ರದೇಶದ (Andhra Pradesh) ಚಿತ್ತೂರು ಜಿಲ್ಲೆಯ ಗಂಗವರಂ ಮಂಡಲ್ ಪ್ರದೇಶದಲ್ಲಿ ನಡೆದಿದೆ.ಆರೋಪಿಯನ್ನು ಶಿಕ್ಷಕ ಚಲಪತಿ (33) ಬಂಧಿತ ಆರೋಪಿ. ಚಲಪತಿ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಚಲಪತಿಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ. ಆದರೂ ಆತ 12ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಪ್ರೀತಿಸಿದ್ದಾನೆ.
ಅದಾದ ಬಳಿಕ ಬಾಲಕಿಯ ಅಂತಿಮ ಪರೀಕ್ಷೆ ಮುಗಿದ ನಂತರ ಸುಳ್ಳು ಹೇಳಿ ತಿರುಪತಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಾಲಕಿಯ ಬಳಿ ತಾನು ಪ್ರಾಮಾಣಿಕ, ತನ್ನನ್ನು ನಂಬು, ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಬಣ್ಣದ ಮಾತುಗಳನ್ನು ಆಡಿ ನಂಬಿಸಿದ್ದಾನೆ.
ಅದಾದ ಬಳಿಕ ಅವರಿಬ್ಬರು ಅಲ್ಲಿನ ದೇವಸ್ಥಾನದಲ್ಲಿ ಮದುವೆಯಾದರು. ಮದುವೆಯಾದ (Marriage) ಬಳಿಕ ಚಲಪತಿ ವರ್ತನೆಯಲ್ಲಿ ಬದಾಲಾವಣೆಯಾಗಿದೆ. ಇದನ್ನು ಗಮನಿಸಿದ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ದಾದ ಬಳಿಕ ಆಕೆ ತನ್ನ ಪೋಷಕರೊಂದಿಗೆ ಗಂಗವರಂ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಚಲಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.