ಕಳೆದ ಕೆಲ ದಿನಗಳಿಂದ ಟಾಲಿವುಡ್ ನ ಖ್ಯಾತ ನಟಿ ಕೀರ್ತಿ ಸುರೇಶ್ ಹೆಸರು ಉದ್ಯಮಿಯ ಜೊತೆ ಕೇಳಿ ಬರ್ತಿದೆ. ಇಬ್ಬರು ಜೊತೆಯಾಗಿ ತೆಗೆಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸದ್ಯದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಟಿ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಬರೆದುಕೊಂಡಿರುವ ಕೀರ್ತಿ ಸುರೇಶ್, ‘ಹುಟ್ಟುಹಬ್ಬದ ಶುಭಾಶಯ ಫರ್ಹಾನೀ.. ಒಳ್ಳೆಯದಾಗಲಿ ಡಾ’ ಎಂದು ಅವರು ಬರೆದುಕೊಂಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಕೆಲ ತಮಿಳು ಮಾಧ್ಯಮಗಳ ಇವರ ಮಧ್ಯೆ ಸಂಬಂಧ ಕಟ್ಟಿದ್ದರು. ಇದನ್ನು ಸುರೇಶ್ ಕುಮಾರ್ ಅಲ್ಲಗಳೆದಿದ್ದಾರೆ.
‘ಕೀರ್ತಿ ಹಾಗೂ ಫರ್ಹಾನ್ ಗೆಳೆಯರಷ್ಟೇ. ಕೀರ್ತಿ ಹಾಕಿದ ಪೋಟೋನ ಕೆಲ ಮಾಧ್ಯಮಗಳು ವೈಭವೀಕರಿಸಿವೆ. ಅದರಲ್ಲಿ ನಿಜವಿಲ್ಲ. ಇಂತಹ ಕಥೆಗಳನ್ನು ನಂಬಬೇಡಿ. ಅವಳ ಪಾಡಿಗೆ ಅವಳನ್ನು ಬಿಟ್ಟುಬಿಡಿ. ನನ್ನ ಮಗಳ ಮದುವೆ ನಿಶ್ಚಯ ಆದರೆ ನಾನು ಮೊದಲು ಮಾಹಿತಿ ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ವರದಿ ಅಥವಾ ವದಂತಿಗಳಿಗೆ ಲಕ್ಷ್ಯ ಕೊಡಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ.