ಬೆಳಗಾವಿ: ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಚಿನ್ನ, ಬೆಳ್ಳಿ ಆಭರಣ ಕಾರಿನ ಮೇಲೆ ದಾಳಿ ನಡೆಸಿ 53 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ನಂದಗಡ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು ಚಿನ್ನ, ಬೆಳ್ಳಿ ಆಭರಣ ಸಾಗಿಸುತ್ತಿದ್ದ ಕಾರಿನ ಸಮೇತ 53.33 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ (Gold) ಹಾಗೂ 19,08,420 ರೂ ಮೌಲ್ಯದ 28.065 ಕೆ.ಜಿ ಬೆಳ್ಳಿ (Silver) ವಶಕ್ಕೆ ತೆಗೆದುಕೊಂಡಿದ್ದಾರೆ.
ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೆ ಕಾರಿನಲ್ಲಿ ಆಭರಣಗಳ ಸಾಗಾಟ ಮಾಡುತ್ತಿದೆ ಆರೋಪದ ಮೇಲೆ ಕಾರನ್ನು ಅಡ್ಡಗಟ್ಟಿ ತಪಾಸಣೆ ಮಾಡಿದಾಗ ಕಾರಿನಲ್ಲಿ ಚಿನ್ನ, ಬೆಳ್ಳಿ ಆಭರಣ ಜೊತೆಗೆ 13 ಲಕ್ಷ ರೂ. ಮೌಲ್ಯದ ಕಾರು ಸೇರಿ 53,33,724 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಕ್ಷೇತ್ರ (Khanapura Constituency) ದಲ್ಲಿ ತಪಾಸಣೆ ವೇಳೆ ವಸ್ತುಗಳು ಪತ್ತೆಯಾಗಿದ್ದು, ಹಳಿಯಾಳ ಮೂಲದ ಧರ್ಮರಾಜ್ ಕುಟ್ರೆ ಎಂಬವರನ್ನ ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.