ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ.
ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.
ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು. ಇದನ್ನು ಕಂಡ ಕ್ಯಾಬ್ ಚಾಲಕ ಪ್ರಜ್ವಲ್ ಆ ರೀಲ್ಸ್ಗಳಿಗೆ ಲೈಕ್, ಕಮೆಂಟ್ ಮಾಡುತ್ತಿದ್ದ. ಮಹಿಳೆ ಕೂಡ ಆ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಳು. ಹೀಗೆ ಇವರಿಬ್ಬರ ನಡುವೆ ಪರಿಚಯ ಬೆಳೆದು ಇಬ್ಬರೂ ಹತ್ತಿರವಾದರು.
ಮೆಸೇಜ್ ಮಾಡ್ತಾ, ಮಾಡ್ತಾ ಪ್ರಜ್ವಲ್ ಮನೆವರೆಗೂ ಬಂದಿದ್ದ. ನಿನ್ನನ್ನೇ ಮದುವೆ ಆಗ್ತೀನೆಂದು ಒಟ್ಟಿಗೆ ವಾಸವಾಗಿದ್ದ. ಆದರೆ ಈಗ ಬೋರಾದ್ಳು ಅಂತಾ ಮೋಸ ಮಾಡಿ ಬಿಟ್ಟು ಹೋಗಿದ್ದಾನೆ.