ಬಿಗ್ ಬಾಸ್ ವೇದಿಕೆ ಅನೇಕರಿಗೆ ಖ್ಯಾತಿಯ ಜೊತೆಗೆ ಕೈ ತುಂಬ ಹಣವನ್ನು ನೀಡುತ್ತದೆ. ಬಿಗ್ ಬಾಸ್ ನಿಂದ ಬಂದ ಹಣದಿಂದ ಲೈಫ್ ನಲ್ಲಿ ಸೆಟಲ್ ಆಗಬಹುದು ಅನ್ನೋದು ಅನೇಕರ ನಂಬಿಕೆ. ಆದರೆ, ಗೆದ್ದ ಹಣ ಸಂಪೂರ್ಣವಾಗಿ ವಿನ್ನರ್ಗೆ ಸೇರುತ್ತಿಲ್ಲ. ‘ಬಿಗ್ ಬಾಸ್ ಮರಾಠಿ ಸೀಸನ್ 2’ರ ವಿನ್ನರ್ ಶಿವ್ ಠಾಕ್ರೆ ಈ ರೀತಿಯ ಆರೋಪ ಮಾಡಿದ್ದಾರೆ.
ಶಿವ ಠಾಕ್ರೆ ಅವರು ಈ ಮೊದಲು ‘ರೋಡಿಸ್’ ರಿಯಾಲಿಟಿ ಶೋ ಮೂಲಕ ಹಿಂದಿ ಹಾಗೂ ಮರಾಠಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದರು. ಅವರು ಮರಾಠಿಯ ‘ಬಿಗ್ ಬಾಸ್ ಸೀಸನ್ 2’ರಲ್ಲಿ ಭಾಗಿ ಆಗಿ ವಿನ್ ಆದರು. 25 ಲಕ್ಷ ರೂಪಾಯಿ ವಿನ್ನಿಂಗ್ ಮೊತ್ತ ನಿಗದಿ ಮಾಡಲಾಗಿತ್ತು. ಶಾಕಿಂಗ್ ವಿಚಾರ ಎಂದರೆ ಇದರಲ್ಲಿ ಅರ್ಧಕ್ಕೂ ಕಡಿಮೆ ಮೊತ್ತವನ್ನು ಕಟ್ ಮಾಡಿ ನೀಡಲಾಗಿದೆ. ಇದು ಅವರಿಗೆ ಶಾಕಿಂಗ್ ಎನಿಸಿದೆ.
‘ಗೆದ್ದವರಿಗೆ 25 ಲಕ್ಷ ರೂಪಾಯಿ ಮೊತ್ತವನ್ನು ನಿಗದಿ ಮಾಡಲಾಗಿತ್ತು. ಅಂತಿಮ ಘೋಷಣೆಗೂ ಎರಡು ಗಂಟೆ ಮೊದಲು 17 ಲಕ್ಷ ರೂಪಾಯಿ ಸಿಗಲಿದೆ ಎಂದು ತಿಳಿಸಿದರು. ಆ ಬಳಿಕ ಅಕೌಂಟ್ಗೆ ಬಂದಿದ್ದು 11 ಲಕ್ಷ ರೂಪಾಯಿ. ಬಟ್ಟೆ, ಹಾಗೂ ತಂದೆ-ತಾಯಿ ಬಂದಿದ್ದರ ವಿಮಾನದ ಟಿಕೆಟ್ ಖರ್ಚನ್ನು ನಮ್ಮದೇ ಹಣದಿಂದ ತೆಗೆದುಕೊಳ್ಳಲಾಗಿತ್ತು’ ಎಂದಿದ್ದಾರೆ ಶಿವ್ ಠಾಕ್ರೆ. ಇದು ಅನೇಕರಿಗೆ ಬೇಸರ ತರಿಸಿದೆ. ರಿಯಾಲಿಟಿ ತಿಳಿದ ಬಳಿಕ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
‘ಝಲಕ್ ದಿಕ್ಲಾಜಾ 11’ ಶೋನ ವಿನ್ನರ್ ಮನಿಶಾ ರಾಣಿ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ‘ಝಲಕ್ ದಿಕ್ಲಾಜಾ ವಿನ್ನಿಂಗ್ ಮೊತ್ತ ಇನ್ನೂ ಬಂದಿಲ್ಲ. ಗೆದ್ದ ಹಣದಲ್ಲಿ ಅರ್ಧದಷ್ಟು ಕಟ್ ಮಾಡುತ್ತಾರೆ. ನನ್ನ ಜೀವನದಲ್ಲಿ ದುಡ್ಡಿನ ಮಳೆ ಆಗುತ್ತಿದೆ ಎಂದು ಜನರು ಅಂದುಕೊಂಡಿರುತ್ತಾರೆ. ಕೋಟ್ಯದಿಪತಿಗಳ ಜೊತೆ ಸುತ್ತಾಡುವವರಿಗೆ ಮಾತ್ರ ಅದು ಸಾಧ್ಯ. ನಾನು ಕೋಟ್ಯಧಿಪತಿ ಅಲ್ಲ, ನನಗೆ ಬಾಯ್ಫ್ರೆಂಡ್ ಕೂಡ ಇಲ್ಲ’ ಎಂದು ಮನಿಶಾ ರಾಣಿ ಹೇಳಿದ್ದರು.
ಬೇರೆ ಭಾಷೆಯಲ್ಲಿ ಮಾತ್ರವಲ್ಲ ಸ್ವತಃ ಕನ್ನಡದಲ್ಲೂ ಈ ಆರೋಪ ಕೇಳಿ ಬಂದಿತ್ತು.ಇತ್ತೀಚೆಗೆ ‘ಕನ್ನಡ ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಕೂಡ ಪೂರ್ತಿ ಹಣ ಬಂದಿಲ್ಲ ಎಂದು ಹೇಳಿದ್ದರು.