ನವದೆಹಲಿ;- ಬದಲಾವಣೆಗಾಗಿ ತೆಲಂಗಾಣ ಹಾತೊರೆಯುತ್ತಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ತೆಲಂಗಾಣದಲ್ಲಿ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ರಣನೀತಿಯ ಕುರಿತು ರಾಜ್ಯದ ಮುಖಂಡರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ತೆಲಂಗಾಣ ಜನತೆ ರಾಜಕೀಯ ಬದಲಾವಣೆಗಾಗಿ ಹಾತೊರೆಯುತ್ತಿದ್ದು, ಕಾಂಗ್ರೆಸ್ನತ್ತ ಒಲವು ತೋರುತ್ತಿದ್ದಾರೆ
ತೆಲಂಗಾಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾವುದೇ ಸವಾಲುಗಳನ್ನು ಸ್ವೀಕರಿಸಲು ಪಕ್ಷ ಸಿದ್ಧವಾಗಿದೆ. ನಾವೆಲ್ಲರೂ ಸೇರಿ ತೆಲಂಗಾಣಕ್ಕೆ ಉಜ್ವಲ ಭವಿಷ್ಯವನ್ನು ನೀಡಲಿದ್ದೇವೆ ಎಂದು ಖರ್ಗೆ ಭರವಸೆ ನೀಡಿದರು.
ಕೆಸಿಆರ್ನ ಊಳಿಗಮಾನ್ಯ ರಾಜಕಾರಣಕ್ಕೆ ಮತ್ತು ಬಿಜೆಪಿ ಹಾಗೂ ಬಿಆರ್ಎಸ್ನ ಅಪವಿತ್ರ ಮೈತ್ರಿಗೆ ತೆಲಂಗಾಣ ಕೊನೆ ಹಾಡಲಿದೆ ಎಂದು ಹೇಳಿದ್ದಾರೆ.