ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಚಾರವಾಗಿ ಅಸಮಾಧಾನಗೊಂಡಿದ್ದಾರೆ. ಹಲವು ದಿನಗಳಿಂದ ರಶ್ಮಿಕಾ ಮತ್ತು ಗಿಲ್ ವಿಚಾರ ಬಹಳ ಸುದ್ದಿಯಾಗಿತ್ತು. ಆಕೆ ನನ್ನ ಕ್ರಶ್ ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಇದೀಗ ಗಿಲ್ ವೈರಲ್ ಪೋಸ್ಟ್ ವಿರುದ್ಧ ಕಿಡಿ ಕಾರಿದ್ದಾರೆ.
ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದು ಅವರು ಉತ್ತರಿಸಿದ್ದಾರೆ. ಯಾವ ಮಾಧ್ಯಮದಲ್ಲೂ ನಾನು ಆ ರೀತಿಯಾಗಿ ಮಾತನಾಡಿಲ್ಲ ಎಂದು ಗಿಲ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಶುಭ್ಮನ್ ಗಿಲ್ ಜೊತೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹೆಸರು ಕೇಳಿ ಬಂದಿದ್ದು, ಇಬ್ಬರೂ ಜೊತೆಗಿದ್ದ ಫೋಟೋಗಳು ವೈರಲ್ ಆಗಿದ್ದವು. ಆ ಸಮಯದಲ್ಲಿ ಸಾರಾ ಮತ್ತು ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಅವರು ಏನೂ ಹೇಳಿಕೆ ನೀಡಿರಲಿಲ್ಲ. ಆದರೆ, ರಶ್ಮಿಕಾ ವಿಚಾರವಾಗಿ ಗಿಲ್ ಅಸಮಾಧಾನಗೊಂಡಿದ್ದಾರೆ.