ನವದೆಹಲಿ: ಇನ್ಮುಂದೆ ಜೊಮ್ಯಾಟೋನಲ್ಲಿ ಆರ್ಡರ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ಹೌದು ನನ್ನ ಹೆಂಡತಿ ಫುಡ್ ಆರ್ಡರ್ ಮಾಡಿದ ಹಿಸ್ಟರಿ ಚೆಕ್ ಮಾಡ್ತಾಳೆ ಅಂತ ಗೋಳಾಡಿದ್ದ ಗಂಡಂದಿರ ಮನವಿಗೆ ವರ್ಷದ ಬಳಿಕ ಜೊಮ್ಯಾಟೋ ಸ್ಪಂದಿಸಿದೆ.
2023ರಲ್ಲಿ ಕರಣ್ ಸಿಂಗ್ ಸೇರಿದಂತೆ ಹಲವು ಬಳಕೆದಾರು ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಆಪ್ ನಲ್ಲಿ ಒದಗಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಜೊಮ್ಯಾಟೋ ಸಿಇಓ ದೀಪೇಂದ್ರ ಗೋಯಲ್ , ತಮ್ಮ ಆಪ್ನಲ್ಲಿ ಹೊಸ ಫೀಚರ್ ಸೇರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಡಿಸೆಂಬರ್ 2023ರಲ್ಲಿ ಕರಣ್ ಸಿಂಗ್ ಡಿಲೀಟ್ ಆಯ್ಕೆ ನೀಡುವಂತೆ ಜೊಮ್ಯಾಟೋಗೆ ಮನವಿ ಮಾಡಿಕೊಂಡಿದ್ದರು. ಎಂಟು ತಿಂಗಳ ಬಳಿಕ ಫುಡ್ ಆರ್ಡರ್ ಹಿಸ್ಟರಿ ಡಿಲೀಟ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಜುಲೈ 12ರಂದು ದೀಪೇಂದ್ರ ಗೋಯಲ್ ಎಕ್ಸ್ ಖಾತೆಯ ಮೂಲಕ ಡಿಲೀಟ್ ಆಯ್ಕೆಯ ಸೇರಿಸಿರುವ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ನೀಡುವ ಸಂದರ್ಭದಲ್ಲಿ ಕರಣ್ ಸಿಂಗ್ ಹೆಸರನ್ನು ಉಲ್ಲೇಖಿಸಿ ದೀಪೇಂದ್ರ ಗೋಯಲ್ ವಿಷಯವನ್ನು ಹಂಚಿಕೊಂಡಿದ್ದು, ಹೊಸ ಆಯ್ಕೆ ಸೇರಿಸಲು ತಾಂತ್ರಿಕ ಕಾರಣಗಳಿಂದ ವಿಳಂಬವಾಯ್ತು. ಈ ಹೊಸ ಫೀಚರ್ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದ ಎಂದು ದೀಪೇಂದ್ರ ಗೋಯಲ್ ಹೇಳಿದ್ದಾರೆ.
ಪತ್ನಿ ತನ್ನ ಮೊಬೈಲ್ನಲ್ಲಿ ಆರ್ಡರ್ ಹಿಸ್ಟರಿ ಚೆಕ್ ಮಾಡುವ ಕಾರಣ ತಡರಾತ್ರಿ ಯಾವುದೇ ಆರ್ಡರ್ ಮಾಡುತ್ತಿಲ್ಲ. ಆದ್ದರಿಂದ ಆರ್ಡರ್ ಮಾಡೋದರಿಂದ ದೂರವಿದ್ದೇವೆ ಎಂದು ಹಲವರು ಪುರುಷರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ಹೊರ ಹಾಕಿದ್ದರು. ಡಿಲೀಟ್ ಆಯ್ಕೆ ನೀಡದ ಕಾರಣ, ನಾವೇ ಏನೇ ಆರ್ಡರ್ ಮಾಡಿಕೊಂಡು ತಿಂದ್ರೆ ಪತ್ನಿಗೆ ಗೊತ್ತಾಗುತ್ತೆ. ಇದರಿಂದ ಸಂಬಂಧದಲ್ಲಿ ಮನಸ್ತಾಪ ಉಂಟಾಗುತ್ತದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.