ತೆಲುಗು ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಖ್ಯಾತಿ ಘಳಿಸಿರುವ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಜನಸೈನಿಕರೆಂದು ಕರೆಯುತ್ತಾರೆ. ಇದೀಗ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪವನ್ ಕಲ್ಯಾಣ್ ಅಭಿಮಾನಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಂಡಾಮಂಡಲರಾಗಿದ್ದಾರೆ.
ಇತ್ತೀಚೆಗಷ್ಟೇ ಪವನ್ ಕಲ್ಯಾಣ್, ರೇಣು ದೇಸಾಯಿ ಪುತ್ರ ಅಖಿರಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ಅಖಿರಾ ಫೋಟೋವನ್ನು ಶೇರ್ ಮಾಡುವಂತೆ ಅಭಿಮಾನಿಗಳು ರೇಣು ದೇಸಾಯಿ ಬಳಿ ಮನವಿ ಮಾಡಿದ್ದಾರೆ. ಇದರಿಂದ ಕೆರಳಿದ ರೇಣು ದೇಸಾಯಿ ಈ ದಿನವಾದರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡಿ. ಅಖಿರಾ ಪವನ್ ಕಲ್ಯಾಣ್ ಮಗನಲ್ಲ ಆತ ನನ್ನ ಮಗ ನಾನು ಆತನ ತಾಯಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರೇಣು ದೇಸಾಯಿಯ ಈ ಉತ್ತರಕ್ಕೆ ಕೆರಳಿದ ಪವನ್ ಕಲ್ಯಾಣ್ರ ಕೆಲವು ಅಭಿಮಾನಿಗಳು ರೇಣು ದೇಸಾಯಿಗೆ ಕೆಟ್ಟದಾಗಿ ಕಮೆಂಟ್ ಹಾಕಲು ಆರಂಭಿಸಿದ್ದಾರೆ. ಇವಳನ್ನು ಬಿಟ್ಟು ಪವನ್ ಕಲ್ಯಾಣ್ ಒಳ್ಳೆಯದು ಮಾಡಿದರು. ಇವಳು 2024ರ ಪರೀಕ್ಷೆಗೆ ಏನೋ ಡ್ರಾಮಾ ಮಾಡಲು ಪ್ರಾರಂಭ ಮಾಡಿದ್ದಾಳೆ, ಅಖಿರಾಗೆ ಪವನ್ ಕಲ್ಯಾಣ್ ಬಯೋಲಜಿಕಲ್ ತಂದೆಯೇ ತಾನೆ ಎಂಬಿತ್ಯಾದಿ ಕಮೆಂಟ್ ಮಾಡಿದ್ದಾರೆ. ಇದರಿಂದ ಕೆರಳಿರುವ ರೇಣು ದೇಸಾಯಿ, ನೀವು ಒಂದು ಒಳ್ಳೆಯ ಕುಟುಂಬದವರಾಗಿದ್ದರೆ ಹೀಗೆಲ್ಲ ಕಮೆಂಟ್ ಮಾಡುತ್ತಿರಲಿಲ್ಲ. ನಿಮ್ಮ ತಾಯಿಯನ್ನು ಒಮ್ಮೆ ಕೇಳಿ ನೋಡಿ ನೀವು ಮಾಡುತ್ತಿರುವುದು ಸರಿಯಾ ಎಂದು ರೇಣು ದೇಸಾಯಿ ಪ್ರಶ್ನೆ ಮಾಡಿದ್ದಾರೆ.
ಯಾರ ಮಗ ಎಂದು ಕೇಳಿದರೆ ಅಪ್ಪನ ಹೆಸರನ್ನೇ ಹೇಳುತ್ತಾರೆ ಅದು ನಮ್ಮ ಸಂಪ್ರದಾಯ ಎಂದು ವಾದ ಮುಂದಿಟ್ಟ ವ್ಯಕ್ತಿಯೊಬ್ಬನಿಗೆ ಖಡಕ್ ಉತ್ತರ ನೀಡಿರುವ ರೇಣು ದೇಸಾಯಿ ಹಾಗಿದ್ದರೆ ತಲತಲಾಂರಗಳಿಂದಲೂ ನೀವು ಮಹಿಳೆಯನ್ನು ಅವಮಾನಿಸುತ್ತಲೇ ಬಂದಿದ್ದೀರಿ ಎಂದಹಾಗಾಯ್ತು. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಮೊದಲ ಪ್ರಾಶಸ್ತ್ಯ ನಿನ್ನ ತಾಯಿಯನ್ನೋ ಚಿಕ್ಕಮ್ಮ-ದೊಡ್ಡಮ್ಮನನ್ನೋ ಹೋಗಿ ಕೇಳು ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ಕಳೆದ 11 ವರ್ಷಗಳಿಂದಲೂ ನಾನು ಈ ಕಷ್ಟವನ್ನು ಅನುಭವಿಸುತ್ತಲೇ ಇದ್ದೀನಿ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡಿಕೊಂಡೇ ಬರಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ರೇಣು ದೇಸಾಯಿ.