ಯಲಹಂಕ:- ಬೆಂಗಳೂರು ನಗರದ 103, ಯಲಹಂಕದ 5ಸರ್ಕಾರಿ ಪಶು ಆಸ್ಪತ್ರೆ ಏಕಾಏಕಿ ವರ್ಗಾವಣೆ ವಿರುದ್ದ ಸ್ಥಳೀಯ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಯಲಹಂಕ ತಾಲೂಕಿನಾದ್ಯಂತ ಸಾವಿರಾರು ಜಾನುವಾರುಗಳಿವೆ. ಹೈನುಗಾರಿಕೆ ಈಭಾಗದ ಪ್ರಮುಖ ವಾಣಿಜ್ಯ ಕಸುಬು. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆಯಾಗ್ತದೆ. ಪಶುಸಂಗೋಪನಾ ಸಚಿವ ವೆಂಕಟೇಶ್ ತಮ್ಮ ಜಿಲ್ಲೆಗಳಿಗೆ ಆಸ್ಪತ್ರೆ ವರ್ಗಾವಣೆ ಮಾಡಿಕೊಳ್ತಿತ್ತಿರೋದು ಎಸ್ಟು ಸರಿ..!? ಎಂದು ಪ್ರಶ್ನಿಸುವ ಮೂಲಕ ಪಶುಸಂಗೋಪನಾ ಸಚಿವರ ನಡೆ ವಿರುದ್ಧ ಎಸ್.ಆರ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ಈ ಪಶು ಆಸ್ಪತ್ರೆಗಳ ವರ್ಗಾವಣೆ ಕೈ ಬಿಡದಿದ್ದರೆ ಮುಂದಿನ ದಿನ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಯಲಹಂಕದಲ್ಲಿ ಪಶು ಸಚಿವರ ಅವೈಜ್ಞಾನಿಕ ನಡೆ ವಿರುದ್ಧ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ.