ಬೆಂಗಳೂರಿನ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ವಿಳಂಬದ ಪರಿಣಾಮವಾಗಿ ಸರ್ಕಾರಕ್ಕೆ ಭಾರೀ ಹಣಕಾಸಿನ ಹೊರೆ ಆಗಿದೆ.
ಸುಮಾರು 75.06 ಕಿಮೀ ಸಂಚಾರ ವ್ಯಾಪ್ತಿಯ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ವಿಳಬದಿಂದ ಯೋಜನಾ ವೆಚ್ಚ ಸುಮಾರು 40,000 ಕೋಟಿ ರೂಪಾಯಿಗಳಿಗೆ ಏರಿಯಾಗಿದೆ.
ಇದು ದಶಕದ ಹಿಂದೆ ಪ್ರಸ್ತಾಪಿಸಲಾದ ಮೂಲ ವೆಚ್ಚದ ಶೇ 52ರಷ್ಟು ಹೆಚ್ಚಳವಾಗಿದೆ.
BMRCL ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆ UDD ಮೂಲಕ ಅನುಮೋದನೆಗಾಗಿ ರಾಜ್ಯ ಹಣಕಾಸು ಇಲಾಖೆಗೆ ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಕಾಮಗಾರಿಗೆ 2014 ರಲ್ಲಿ 72 ಕಿಮೀಗೆ ಅನುಮೋದನೆ ನೀಡಲಾಗಿತ್ತಿ. 3 ಕಿಮೀ ನಂತರ ಸೇರಿಸಲಾಗಿತ್ತು. ಎರಡನೇ ಹಂತದ ಕಾಮಗಾರಿ 26,405 ಕೋಟಿ ರೂ. ವೆಚ್ಚದಲ್ಲಿ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. 2021 ರ ವೇಳೆಗೆ, ವೆಚ್ಚವನ್ನು 30,695 ಕೋಟಿ ರೂ.ಗೆ ಪರಿಷ್ಕರಿಸಲಾಯಿತು (ಇದು ಹೊರ ವರ್ತುಲ ರಸ್ತೆ ಮಾರ್ಗ (ಹಂತ-2ಎ) ಮತ್ತು ಕೆಆರ್ ಪುರದಿಂದ ಕೆಐಎ (ಹಂತ-2ಬಿ) ವರೆಗಿನ ವಿಮಾನ ನಿಲ್ದಾಣ ಮಾರ್ಗವನ್ನು ಒಳಗೊಂಡಿಲ್ಲ). ಪರಿಷ್ಕೃತ ಭೂಸ್ವಾಧೀನ ವೆಚ್ಚಗಳು, ಕೆಲವು ಕಿಲೋಮೀಟರ್ಗಳ ಸೇರ್ಪಡೆ, ಹಣದುಬ್ಬರ, ವಿಳಂಬಕ್ಕೆ ಕಾರಣವಾದ ಸಾಂಕ್ರಾಮಿಕ ರೋಗಗಳು ಮತ್ತು ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿನ ಏರಿಳಿತಗಳು ಹಿಂದಿನ ಅಂದಾಜಿಗಿಂತ ಸುಮಾರು 10,000 ಕೋಟಿ ರೂಪಾಯಿಗಳ ಏರಿಕೆಗೆ ಕಾರಣಗಳಾಗಿವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಎಸ್ಆರ್ ಉಮಾಶಂಕರ್ ಹೇಳಿದ್ದಾರೆ.
ವಿಳಂಬವೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡನೇ ಹಂತದ ಕಾಮಗಾರಿ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷಗಳ ನಂತರ, ಸಂಪೂರ್ಣ ನೆಟ್ವರ್ಕ್ ಇನ್ನೂ ಸಿದ್ಧವಾಗಿಲ್ಲ. ಮೂಲ ಗಡುವಿನ ನಂತರ ಸಾಂಕ್ರಾಮಿಕ ರೋಗವು ಅಪ್ಪಳಿಸಿತು. ಅದಕ್ಕೇ ಬದ್ಧವಾಗಿದ್ದರೆ, ಈ ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತಲೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
\