ಬೆಂಗಳೂರು: ಹೊರಗಡೆ ಹೋಗಿ ಆಟವಾಡಿ ದೈಹಿಕವಾಗಿ ಸದೃಢವಾಗುವ ವಯಸ್ಸಿನಲ್ಲಿ ಮಕ್ಕಳು ಆಟಗಳನ್ನು ಆಡುವ ಬದಲಿಗೆ ಸ್ಮಾರ್ಟ್ ಫೋನ್ ಹಿಡಿದುಕೊಂಡು ಕುಳಿತಿರುತ್ತಾರೆ. ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳಲ್ಲಿ ಮಯೋಪಿಯಾ ಖಾಯಿಲೆ ಹೆಚ್ಚಾಗಿದ್ದು.., ಮಯೋಫಿಯಾ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲು ನಾರಾಯಣ ನೇತ್ರಾಲಯ ಮಯೋಫಿಯಾ ರನ್ ಅನ್ನು ಏರ್ಪಡಿಸಿತ್ತು…
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ಗೆ ದಾಸರಾಗುತ್ತಿದ್ದು, ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸ್ಮಾರ್ಟ್ ಫೋನ್ ಜನರ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಮೊಬೈಲ್ ಫೋನ್ ಇಲ್ಲದೇ ಯಾರಿಗೂ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ… ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಮಯೋಫಿಯಾ ಸಮಸ್ಯೆ ಶುರುವಾಗಿದ್ದು.., ಮಯೋಫಿಯಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾರಾಯಣ ನೇತ್ರಾಲಯ ಮಯೋಫಿಯಾ ಓಟ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಹೌದು… ಕೊವಿಡ್ ನಂತರ ಮಕ್ಕಳು ಒಂದು ರೀತಿಯಲ್ಲಿ ಹೊರಗೆ ಹೋಗಿ ಆಟವಾಡುವುದನ್ನೆ ನಿಲ್ಲಿಸಿದ್ದಾರೆ. ಯಾವಾಗಲು ಮೊಬೈಲ್, ಟ್ಯಾಬ್, ಟಿವಿ ಅಂತ ನಾಲ್ಕು ಗೋಡೆಯ ಮಧ್ಯೆಯೇ ಇರುತ್ತಾರೆ. ಹೀಗಾಗಿ ಮಕ್ಕಳನ್ನ ಹೊರ ಜಗತ್ತಿಗೆ ಕರೆತರುವ ಪ್ರಯತ್ನವನ್ನ ನಾರಾಯಣ ನೇತ್ರಾಲಯ ಮಾಡಿದ್ದು.., ಮಯೋಫಿಯಾ ಓಟ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಇನ್ನೂ.. ಕಬ್ಬನ್ ರಸ್ತೆಯಲ್ಲಿರುವ ರಾಜೇಂದ್ರ ಸಿಂಗ್ ಸೇನಾ ಅಧಿಕಾರಿಗಳ ಸಂಸ್ಥೆ ಆವರಣದಲ್ಲಿ ಮೊದಲಿಗೆ ವಾರ್ಮಪ್ ಎಕ್ಸಸೈಜ್ ಮಾಡಿಸಿ ನಂತರ ಮಯೋಫಿಯಾ ಓಟಕ್ಕೆ ಚಾಲನೆ ನೀಡಲಾಯಿತು. ಸುಮಾರು ಒಂದು ವರೆ ಕಿಲೋ ಮೀಟರ್ವರೆಗೂ ನಡೆದ ಈ ಮಯೋಫಿಯಾ ಓಟದಲ್ಲು ಪೋಷಕರು ಹಾಗೂ ಮಕ್ಕಳು ಭಾಗವಹಿಸಿದರು ಹಾಗೂ ಪ್ರಮುಖವಾಗಿ ನಾರಾಯಣ ನೇತ್ರಾಲಯವು ಮಯೋಫಿಯಾ ಸಮಸ್ಯೆ ಬಗ್ಗೆ ಪೋಷಕರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಿದರು…
ಒಟ್ನಲ್ಲಿ ಇತ್ತೀಚಿಗೆ ಮಕ್ಕಳಲ್ಲಿ ಮಯೋಫಿಯಾ ಸಮಸ್ಯೆ ಹೆಚ್ಚಾಗಿದ್ದು.., ನಾರಾಯಣ ನೇತ್ರಾಲಯವು ಮಯೋಫಿಯಾ ಓಟದ ಮೂಲಕ ಮಯೋಫಿಯಾ ಬಗ್ಗೆ ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸಿದಂತೂ ನಿಜ.