ನಟಿ ಸಂಜನಾ ಗಲ್ರಾನಿ ಸದ್ಯ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಮಗುವಾದ ಬಳಿಕ ಸಿನಿಮಾ ರಂಗದಿಂದ ದೂರವಿದ್ದ ಸಂಜನಾ ಇದೀಗ ಮತ್ತೆ ಬಣ್ಣದ ಬದುಕಿಗೆ ಕಂಬ್ಯಾಕ್ ಆಗಿದ್ದಾರೆ. ಮಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ತಾಯ್ತನದ ನಂತರ ಒಪ್ಪಿಕೊಂಡ ಮೊದಲ ಸಿನಿಮಾವಾಗಿದೆ.
ಮಲಯಾಳಂ ಚಿತ್ರವೊಂದರ ಕಥೆ ಕೇಳಿ ಮೆಚ್ಚಿಕೊಂಡಿರವ ಸಂಜನಾ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮಾಲಿವುಡ್ ನಟ ಶ್ರೀನಾಥ್ ಬಸಿ ನಾಯಕನಾಗಿರುವ ಈ ಚಿತ್ರಕ್ಕೆ ವಿಜಯ್ ಕುಮಾರ್ ನಿರ್ದೇಶನ ಮಾಡ್ತಿದ್ದು, ಸಂಜನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಒಂದು ವಾರದಿಂದ ಸಿನಿಮಾ ಶೂಟಿಂಗ್ನಲ್ಲಿ ಸಂಜನಾ ಭಾಗವಹಿಸುತ್ತಿದ್ದಾರೆ.
11 ತಿಂಗಳ ಮಗು ಅಲಾರಿಕ್ ಜೊತೆ ಸಂಜನಾ ಅವರು ಶೂಟಿಂಗ್ಗಾಗಿ ಪ್ರಯಾಣ ಮಾಡಿದ್ದು, ನನ್ನ ತಾಯಿಯ ಬೆಂಬಲದಿಂದಲೇ ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದಾರೆ. ದಂಡುಪಾಳ್ಯ-2 ಬಳಿಕ ಮೋಹನ್ ಲಾಲ್ ನಟನೆಯ ‘ಆರಟ್ಟು’ ಮತ್ತು ‘ಚೋರನ್’ ಸಿನಿಮಾದಲ್ಲಿ ಕಡೆಯದಾಗಿ ಸಂಜನಾ ನಟಿಸಿದ್ದರು. ಇದೀಗ ಮಾಲಿವುಡ್ನ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಟನೆಯತ್ತ ಮುಖ ಮಾಡಿದ್ದು ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.