ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ನಲ್ಲೇ ಹಲವು ಸರಕು ಹಾಗೂ ಸೇವೆಗಳ ಮೇಲಿನ ತೆರಿಗೆ ಏರಿಳಿತ ಮಾಡಲಾಗಿದೆ.
ಮುಂಬರುವ ದಿನಗಳಲ್ಲಿ ಮೊಬೈಲ್ ಹಾಗೂ ಮೊಬೈಲ್ ಚಾರ್ಜರ್ಗಳ ಬೆಲೆಯೂ ಕೂಡ ಅಗ್ಗವಾಗಲಿವೆ. ಇವುಗಳ ಮೇಲೆ ಇರುವ ಕಸ್ಟಮ್ಸ್ ಡ್ಯೂಟಿಯನ್ನು ಸುಮಾರು ಶೇಕಡಾ 15 ರಷ್ಟು ಇಳಿಕೆ ಮಾಡಲಾಗಿದೆ. ಅವುಗಳ ಜೊತೆಗೆ ಚರ್ಮ, ಬಟ್ಟೆ, ಉತ್ಪಾನೆಗಳ ಮೇಲಿನ ಕಸ್ಟಮ್ಸ್ ಚಾರ್ಜ್ ಅನ್ನು ಕೂಡ ಇಳಿಕೆ ಮಾಡಲಾಗಿದ್ದು. ಇವು ಕೂಡ ಮುಂಬರುವ ದಿನಗಳಲ್ಲಿ ಅಗ್ಗವಾಗಲಿವೆ.
ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊಬೈಲ್ ಫೋನ್ ತಯಾರಿಕೆಯಲ್ಲಿ ತೊಡಗಿರುವ ಹಲವಾರು ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಇನ್ನು ದೇಶೀಯ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಮೌಲ್ಯವರ್ಧನೆ ಹೆಚ್ಚಿಸುವ ಸಲುವಾಗಿ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ಗಳ ಮೇಲಿನ ಬಿಸಿಡಿಯನ್ನು ಇಳಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ದೇಶದ ಬಹುಸಂಖ್ಯಾತ ಜನರು ಮೊಬೈಲ್ ಪ್ರಿಯರು ಹಾಗೂ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳ ಪ್ರೇಮಿಗಳು. ಇವರಿಗೆ ಗುಡ್ ನ್ಯೂಸ್ ಕೊಟ್ಟಿರುವ ಸರ್ಕಾರ, ಈ ಎಲ್ಲಾ ವಸ್ತುಗಳ ಬೆಲೆ ಇಳಿಕೆ ಆಗುವ ರೀತಿಯಲ್ಲಿ ಆಮದು ಸುಂಕವನ್ನ ಕಡಿತ ಮಾಡಿದೆ. ಆದರೆ, ಬಟ್ಟೆ ಹಾಗೂ ಎಲ್ಲಾ ವಿದ್ಯುತ್ ಉಪಕರಣಗಳ ಬೆಲೆ ಏರಿಕೆಯಾಗಿದೆ. ಈ ಮೂಲಕ ಜನರ ಜೇಬಿಗೆ ಕತ್ತರಿ ಬೀಳಲಿದೆ.