ಕೆ.ಆರ್.ಪುರ: ಚಂದ್ರಯಾನ ನಾಲ್ಕರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯುತ್ತಿದ್ದು, ನಾವು ಚಂದ್ರಯಾನದಿಂದ ವಸ್ತುವೊಂದನ್ನು ತರುವ ಮಹತ್ತರ ಉದ್ದೇಶ ಹೊಂದಿದ್ದೆವೆ ಎಂದು ಇಸ್ರೋ ಪ್ರಾಧ್ಯಾಪಕ ಡಾ.ಪಿ.ಜಿ. ದಿವಾಕರ್ ಅವರು ತಿಳಿಸಿದರು.
ಕೆ.ಆರ್.ಪುರದ ಕೇಂಬ್ರಿಡ್ಜ್ ಕಾಲೇಜನಲ್ಲಿ ಏರ್ಪಡಿಸಿದ್ದ 14ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಸ್ರೋ ವತಿಯಿಂದ ಚಂದ್ರಯಾನ ನಾಲ್ಕರ ಬಗ್ಗೆ ಅಧ್ಯಯನಗಳು ನಡೆಯುತ್ತಿದ್ದು,ಉಪಗ್ರಹ ಉಡಾವಣೆ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಿದ್ದೆವೆ ಎಂದು ನುಡಿದರು.
ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಸಲಹೆ ನೀಡಿದರು.
ಭೂಮಿ, ಸಾಗರ, ವಾಯುಮಂಡಲದ ನಂತರ ಬಾಹ್ಯಾಕಾಶ ಕ್ಷೇತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾಹ್ಯಾಕಾಶ ಅನ್ವೇಷಣೆ, ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮ, ವಸತಿ, ಇಂಧನ, ಭೂಮಿಗಾಗಿ ಬಾಹ್ಯಾಕಾಶ ಮೊದಲಾದ ಪರಿಕಲ್ಪನೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪ್ರಗತಿ ಸಾಧಿಸುತ್ತಿದೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ಚಂದ್ರನ ಮೇಲೆ ಮಾನವರನ್ನು ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಭಾರತವು ಈ ಕ್ಷೇತ್ರದಲ್ಲಿ ಸಮರ್ಥ ದೇಶವಾಗಿ ಹೊರ ಹೊಮ್ಮಿದ್ದು, ಹೊರ ರಾಷ್ಟ್ರಗಳಿಗೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದರು.
ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳನ್ನು ಹೊರತರುವ ನಿಟ್ಟಿನಲ್ಲಿ ಕೇಂಬ್ರಿಡ್ಜ್ ಕಾಲೇಜು ಉತ್ತಮ ಅಡಿಪಾಯ ಹಾಕುತ್ತಿದ್ದು,ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ಹಲವು ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ.ಕೇಂಬ್ರಿಡ್ಜ್ ಸಂಸ್ಥೆ
ಮಕ್ಕಳ ಸಮಗ್ರ ಅಭಿವೃದ್ಧಿ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕೇಂಬ್ರಿಡ್ಜ್ ಕಾಲೇಜಿನ ಅಧ್ಯಕ್ಷ ಡಿ.ಕೆ.ಮೋಹನ್,ಡಾ.ಬಾಲಸುಬ್ರಮಣ್ಯಮೂರ್ತಿ,ಸಿಇಓ ನಿತೀನ್ ಮೋಹನ್,ಪ್ರಾಂಶುಪಾಲರಾದ ಇಂದುಮತಿ ಇದ್ದರು.