ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದ ನಟಿ ರುಕ್ಮಿಣಿ ವಸಂತ್ ಇದೀಗ ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ. ನಟಿಯ ನಯಾ ಫೋಟೋ ನೋಡಿದ ಪ್ರತಿಯೊಬ್ಬರು ಆಕೆಯ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ರುಕ್ಮಿಣಿ ವಸಂತ್ ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ತಮ್ಮ ಸಿಂಪಲ್ ಲುಕ್ ನಿಂದಲೇ ಗಮನ ಸೆಳೆದ ನಟಿ ಸದಾ ಅದೇ ರೀತಿಯೇ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ರುಕ್ಮಿಣಿ ಈ ಭಾರಿ ಮಾರ್ಡನ್ ಲುಕ್ ಟ್ರೈ ಮಾಡಿದ್ದಾರೆ. ಬಿಳಿ ಡ್ರಸ್ ಧರಿಸಿ ಫ್ರೀ ಹೇರ್ ಬಿಟ್ಟು ಸಖತ್ತಾಗೆ ಕಾಣಿಸಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಈ ಒಂದು ಲುಕ್ ಅಲ್ಲಿ ಲೈಟ್ ಆಗಿಯೇ ಮೇಕ್ಅಪ್ ಹಾಕಿದ್ದಾರೆ. ಓಪನ್ ಹೇರ್ ಬಿಟ್ಟಿದ್ದಾರೆ. ಲೈಟ್ ಕಲರ್ ನೀಲಿ ಬಣ್ಣದ ಜೀನ್ಸ್ ತೊಟ್ಟಿದ್ದಾರೆ. ಅದಕ್ಕೆ ಒಪ್ಪುವ ಬಿಳಿ ಬಣ್ಣದ ಟಾಪ್ ಸಹ ತೊಟ್ಟಿದ್ದಾರೆ. ಹೀಗೆ ರುಕ್ಮಿಣಿ ವಸಂತ್ ಇಲ್ಲಿ ಮಾಡ್ರನ್ ಲುಕ್ ಅಲ್ಲಿಯ ಕಾಣಿಸಿಕೊಳ್ಳುತ್ತಿದ್ದಾರೆ.
ರುಕ್ಮಿಣಿ ಶೇರ್ ಮಾಡಿರುವ ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿಲ್ಲ. ಬದಲಾಗಿ ನೀವೆ ಈ ಫೋಟೋಗಳಿಗೆ ಕ್ಯಾಷ್ಶನ್ ನೀಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಹಾಗೆ ಇಂಗ್ಲೀಷ್ನಲ್ಲಿ ಮಾತೊಂದನ್ನು ಬರೆದುಕೊಂಡಿದ್ದಾರೆ.
ರುಕ್ಮಿಣಿ ವಸಂತ್ “Outsourcing Caption Responsibilities to you” ಅನ್ನೋದನ್ನ ಬರೆದಿದ್ದಾರೆ. ಅಂದ್ರೆ, ನನ್ನ ಈ ಫೋಟೋಗಳಿಗೆ ಕ್ಯಾಪ್ಶನ್ ಅನ್ನ ನಾನು ಕೊಡೋದಿಲ್ಲ. ಆ ಜವಾಬ್ದಾರಿ ನಿಮ್ಮದೆ ಅನ್ನೋ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ.
ರುಕ್ಮಿಣಿ ವಸಂತ್ ನಟನೆಯ ಕನ್ನಡದ ಎರಡು ಚಿತ್ರಗಳು ರಿಲೀಸ್ಗೆ ರೆಡಿ ಇವೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಘೀರ ಚಿತ್ರದಲ್ಲಿ ರುಕ್ಮಿಣಿ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲೂ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಎರಡು ತಮಿಳು ಚಿತ್ರ ಒಪ್ಪಿದ್ದಾರೆ. ಏಸ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮತ್ತೊಂದು ಚಿತ್ರದ ಶೂಟಿಂಗ್ ನಡೆಯುತ್ತಿದೆ. ಜೂನಿಯರ್ ಎನ್.ಟಿ.ಆರ್. ಅಭಿನಯದ ಡ್ರ್ಯಾಗನ್ ಚಿತ್ರಕ್ಕೂ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದಾರೆ ಅನ್ನೋ ಸುದ್ದಿ ಇದೆ.