ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಬಿಗ್ ಶಾಕ್ ಕೊಟ್ಟಿದೆ.
ಈ ಬಗ್ಗೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಮೊಹಮ್ಮದ್ ಶಮಿ ಮಾತಾಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ನಲ್ಲಿ ಮುಂದಿನ ಸೀಸನ್ಗೆ ಇರ್ತಾರಾ? ಎಂಬ ಪ್ರಶ್ನೆಗೆ ಶಮಿ ಉತ್ತರ ಹೀಗಿತ್ತು. ಅದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಿರ್ಧಾರ ಎಂದು ಉತ್ತರ ಕೊಟ್ಟರು.
ಕಳೆದ ಸಲ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ರು. ಈ ಸಲ ಕೂಡ ಹಾರ್ದಿಕ್ ಅವರೇ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಅವರನ್ನು ಉಳಿಸಿಕೊಳ್ಳಬೇಕಾ? ಬೇಡವೇ? ಅನ್ನೋದು ಫ್ರಾಂಚೈಸಿ ನಿರ್ಧಾರ. ಫ್ರಾಂಚೈಸಿಗಳು ಆಟಗಾರರ ಫ್ಯಾನ್ ಬೇಸ್ ನೋಡುತ್ತವೆ. ಯಾವಾಗಲೂ ಆಟಗಾರನ ಬಗ್ಗೆ ಯೋಚನೆ ಮಾಡುತ್ತವೆ. ಮುಂಬೈ ಇಂಡಿಯನ್ಸ್ ಮೈನ್ ಬೇಸ್ ರೋಹಿತ್ ಶರ್ಮಾ ಫ್ಯಾನ್ಸ್. ಹಾಗಾಗಿ ರೋಹಿತ್ ಮತ್ತೆ ಮುಂಬೈ ಕ್ಯಾಪ್ಟನ್ ಆಗಬಹುದು ಎಂದರು.
ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಕಪ್ ಗೆದ್ದಿದೆ. ಈ ಮುಂಬೈ ಇಂಡಿಯನ್ಸ್ಗೆ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ. ಒಂದು ಸೀಸನ್ನಲ್ಲಿ ಕಪ್ ಗೆಲ್ಲಿಸಿ, ಮತ್ತೊಂದು ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಹಾರ್ದಿಕ್ ಪಾಂಡ್ಯಗಾಗಿ ರೋಹಿತ್ಗೆ ಕ್ಯಾಪ್ಟನ್ಸಿಯಿಂದ ಕೊಕ್ ಕೊಡಲಾಗಿತ್ತು.