ದುಬೈ: 2019 ರಲ್ಲಿ ದುಬೈನಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯ ವ್ಯಕ್ತಿಗೆ 5 ಮಿಲಿಯನ್ (₹ 11 ಕೋಟಿಗೂ ಹೆಚ್ಚು) ಪರಿಹಾರವನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿವೆ.
20 ವರ್ಷದ ಮುಹಮ್ಮದ್ ಬೇಗ್ ಮಿರ್ಜಾ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಒಮಾನ್ನಿಂದ ಯುಎಇಗೆ ಪ್ರಯಾಣಿಸುತ್ತಿದ್ದ ಬಸ್ ದುಬೈನಲ್ಲಿ ಅಪಘಾತಕ್ಕೀಡಾಯಿತು. ಈ ವೇಳೆ ಬಸ್ ನಲ್ಲಿ ಒಟ್ಟು 31 ಪ್ರಯಾಣಿಕರಿದ್ದು ಅವರಲ್ಲಿ 12 ಭಾರತೀಯರು ಸೇರಿ 17 ಮಂದಿ ಮೃತಪಟ್ಟಿದ್ದರು.
ದುಬೈನ್ ನ ಮೆಟ್ರೋ ನಿಲ್ದಾಣದ ಪಾರ್ಕಿಂಗ್ನ ಪ್ರವೇಶ ದ್ವಾರದಲ್ಲಿ ಬಸ್ ಚಾಲಕ ಓವರ್ಹೆಡ್ ಹೈಟ್ ಬ್ಯಾರಿಯರ್ಗೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದ್ದು, ಬಸ್ನ ಮೇಲಿನ ಎಡ ಭಾಗವು ನಾಶವಾಗಿದೆ ಎಂದು ವರದಿ ತಿಳಿಸಿದೆ. ಬಸ್ ನ ಓಮನ್ ಮೂಲದ ಚಾಲಕನಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಸಂತ್ರಸ್ತರ ಕುಟುಂಬಗಳಿಗೆ 3.4 ಮಿಲಿಯನ್ ಹಣವನ್ನು ಪಾವತಿಸಲು ಆದೇಶಿಸಲಾಗಿದೆ.
ಮಿರ್ಜಾ ಪರ ವಕೀಲರು ವಾದಿಸಿದ್ದು, ಆರಂಭದಲ್ಲಿ ನ್ಯಾಯಾಲಯವು ಆರಂಭದಲ್ಲಿ 1 ಮಿಲಿಯನ್ ಪರಿಹಾರ ನೀಡಲು ಒಪ್ಪಿಕೊಂಡಿತ್ತು. ನಂತರ ಅರ್ಜಿದಾರರು ದುಬೈ ಫಸ್ಟ್ ಇನ್ಸ್ಟಾನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದರು ಮತ್ತು ಪರಿಹಾರದ ಅಂಕಿಅಂಶವನ್ನು 5 ಮಿಲಿಯನ್ ದಿರ್ಹಮ್ಗೆ ಪರಿಷ್ಕರಿಸುವ ತೀರ್ಪನ್ನು ಪಡೆದರು ಎಂದು ವರದಿ ತಿಳಿಸಿದೆ.
ಮಿರ್ಜಾ ತಮ್ಮ ಸಂಬಂಧಿಕರೊಂದಿಗೆ ರಜಾದಿನಗಳನ್ನು ಕಳೆದ ನಂತರ ಮಸ್ಕತ್ನಿಂದ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಮಿರ್ಜಾ ಗಂಭೀರವಾಗಿ ಗಾಯಗೊಂಡಿದ್ದರು. ಮಿರ್ಜಾ ಎರಡು ತಿಂಗಳ ಕಾಲ ದುಬೈನ ಆಸ್ಪತ್ರೆಗೆ ದಾಖಲಾಗಿದ್ದು, 14 ದಿನಗಳ ಕಾಲ ಪ್ರಜ್ಞಾಹೀನರಾಗಿದ್ದರು, ನಂತರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಯಿತು.
ಮಿರ್ಜಾ ಅವರ ಮೆದುಳಿಗೆ ಶೇಕಡಾ 50 ರಷ್ಟು ಶಾಶ್ವತ ಹಾನಿಯಾಗಿದೆ ಎಂದು ವರದಿಯನ್ನು ಆಧರಿಸಿ, ಯುಎಇ ಸುಪ್ರೀಂ ಕೋರ್ಟ್ ಪರಿಹಾರವನ್ನು ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ.ತೀರ್ಪಿನಿಂದ ನಮಗೆ ತುಂಬಾ ಸಂತೋಷವಾಗಿದೆ ಎಂದು ಹಿರಿಯ ಸಲಹೆಗಾರ ಈಸಾ ಅನೀಸ್ ಹೇಳಿದ್ದಾರೆ.