ಅಮರಾವತಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಇತ್ತ ಅಯೋಧ್ಯೆಗೆ ರಾಮಭಕ್ತರು ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ತಿರುಪತಿಯಿಂದಲೂ ಇದೀಗ ಅಯೋಧ್ಯೆಗೆ ಲಡ್ಡು ಪೂರೈಕೆಯಾಗಲಿದೆ.
ಈ ಸಬಂಧ ತಿರುಪತಿ (Tirupati) ತಿರುಮಲ ದೇವಸ್ಥಾನಂ (TTD) ಅಧಿಕೃತವಾಗಿ ತಿಳಿಸಿದೆ. ದೇಗುಲದ ವತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ ಮಾಡಲಾಗುವುದು ಎಂದು ಹೇಳಿದೆ.
ಉದ್ಘಾಟನೆಯ ದಿನ ರಾಮಭಕ್ತರಿಗೆ ಈ ಲಡ್ಡು (Laddu) ವಿತರಿಸಲಾಗುವುದು. ಪ್ರತಿ ಲಡ್ಡುವಿನ ತೂಕ 25 ಗ್ರಾಂ ಇರುತ್ತದೆ ಎಂದು ಟಿಟಿಡಿಯ ಅಧಿಕಾರಿಗಳು ವಿವರಿಸಿದ್ದಾರೆ
ಅಯೋಧ್ಯೆಗೆ ಲಡ್ಡು ಪೂರೈಕೆ ಮಾಡುವ ಕುರಿತು ಟಿಟಿಡಿ ಒಪ್ಪಿಗೆ ನೀಡಿದೆ. ಹೀಗಾಗಿ ಶ್ರೀರಾಮ ಪ್ರಾಣ ಪತಿಷ್ಠಾಪನೆಯ ದಿನದಂದು ಭಕ್ತರಿಗೆ ವಿತರಣೆ ಮಾಡಲು ಅಯೋಧ್ಯೆಗೆ ಲಡ್ಡು ಪೂರೈಕೆ ಮಾಡುತ್ತೇವೆ ಎಂದು ಟಿಟಿಡಿ ಆಡಳಿತ ಕಾರ್ಯನಿರ್ವಾಹಕ ಎ ವಿ ಧರ್ಮ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.