ನಿಯಮ ಉಲ್ಲಂಘನೆ ಹಿನ್ನೆಲೆ ಒಟ್ಟು 10.76 ಲಕ್ಷ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ದಂಡ ವಿಧಿಸಿ ಬರೋಬ್ಬರಿ 5.38 ಕೋಟಿ ರೂ. ಹಣವನ್ನು11 ತಿಂಗಳಿನಲ್ಲಿ ವಸೂಲಿ ಮಾಡಿದೆ
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್ಸಿಎಲ್ ಜಾರಿ ಮಾಡಿದೆ.
ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ ದಂಡ ಹಾಕುತ್ತಿದೆ. ಕಳೆದ ವಾರ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಗಳ ಕಾಲ ನಿಂತಿದ್ದ ಯುವಕನಿಗೆ 50 ರೂ. ದಂಡ ಹಾಕಿತ್ತು. ಇದಾದ ಬಳಿಕ ಈಗ ಆಸಕ್ತಿಕರ ವಿಚಾರಗಳು ಬಯಲಿಗೆ ಬರುತ್ತಿದೆ. ಕಳೆದ ಜೂನ್ ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚು ಸಮಯ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಲಾಗಿದೆ. ಒಬ್ಬರಿಗೆ 50 ರೂ. ನಂತೆ 5.38 ಕೋಟಿ ರೂ. ದಂಡ ವಸೂಲಿ ಮಾಡಿದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ನಿಯಮದ ಪ್ರಕಾರವೇ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಸಮರ್ಥನೆ ನೀಡಿದೆ.