ಬೆಂಗಳೂರು: 1 ಕೋಟಿ ಆದಾಯ ದೇವಾಲಯಗಳಿಂದ 10% ಸಂಗ್ರಹ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದಲ್ಲಿ 200ಕ್ಕೂ ಹೆಚ್ಚು ದೇವಸ್ಥಾನಗಳು ಒಂದು ಕೋಟಿ ಆದಾಯ ಮೀರಿದೆ ಹೀಗಾಗಿ ದೇವಸ್ಥಾನದ ಹಣವನ್ನು ಲೂಟಿ ಮಾಡಲು ಸರ್ಕಾರ ಹೊರಟಿದೆ ಅಧಿಕಾರಿಗಳಿಂದ ದೇವಸಾನದ ಹಣ ಲೂಟಿ ಮಾಡಲು ಸರ್ಕಾರ ಹೊರಟಿದೆ ಮಸೀದಿ, ದರ್ಗಾ, ಚರ್ಚ್ ಇದರ ಬಗ್ಗೆ ಸರ್ಕಾರ ಮಾತನಾಡಲ್ಲ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ವಿರುದ್ಧ ಅಭಿಯಾನ ಆರಂಭಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭ ಮಾಡಲಾಗಿದೆ
ಹಾಗೆ ನೋ ಹುಂಡಿ ಕಾಣೆಕೆ ಎಂದು ಪೊಸ್ಟರ್ ಮುಖಾಂತರ ಅಭಿಯಾನ ಶುರುಮಾಡಿದ್ದು ಸರ್ಕಾರ ಹಿಂದೂ ದೇವಸ್ಥಾನಗಳನ್ನು ಕಂಟ್ರೋಲ್ ಮಾಡಿದೆ ಹೀಗಾಗಿ ದೇವಸ್ಥಾನಕ್ಕೆ ಹೋದ್ರೆ ಹುಂಡಿಗೆ ಹಣ ಹಾಕದಂತೆ ಮನವಿ ಕೂಡ ಮಾಡಲಾಗಿದೆ.