ಡೆನ್ವರ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ತಿಂಗಳಲ್ಲಿ ಇಬ್ಬರು ವ್ಯಕ್ತಿಗಳಿಗೆ ಶ್ವಾನವು ಕಚ್ಚಿತ್ತು. ಘಟನೆಯ ತನಿಖೆಯ ಬಳಿಕ ಶ್ವಾನವನ್ನು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎಪ್ರಿಲ್ 26, 2024ರಂದು ಬೆಳಗ್ಗೆ ಸುಮಾರು 11.15 ಗಂಟೆಯಲ್ಲಿ ಬೆಲ್ಲಾ ಎಂಬ ಬೆಲ್ಜಿಯನ್ ಮ್ಯಾಲಿನಾಯ್ಸ್ ತಳಿಯ ಶ್ವಾನವು ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ವಾನವು ವಿಮಾನ ಯಾನ ಸಂಸ್ಥೆಯ ಉದ್ಯೋಗಿ ಹಾಗೂ ಪ್ರಯಾಣಿಕನಿಗೆ ಕಚ್ಚಿತ್ತು. ಈ ಪೈಕಿ ಓರ್ವ ವ್ಯಕ್ತಿ ಅಮೆರಿಕನ್ ಏರ್ಲೈನ್ಸ್ನ ಉದ್ಯೋಗಿಯಾಗಿದ್ದರೆ, ಮತ್ತೊಬ್ಬರು ವಿಮಾನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಾಗಿದ್ದರು.
ಶ್ವಾನವನ್ನು ಡೆನ್ವರ್ ಪ್ರಾಣಿಗಳ ತಂಗುದಾಣದಲ್ಲಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿದ್ದು, ಮೇ 6ರಂದು ಬಿಡುಗಡೆ ಮಾಡಲಾಗುತ್ತದೆ. ಬೆಲ್ಲಾ ಹೆಸರಿನ ಈ ಶ್ವಾನದ ಮಾಲಕರು, ಅದು ಶ್ವಾನದಳದ ಶ್ವಾನವೆಂದು ಪ್ರತಿಪಾದಿಸಿದ್ದು, ಇಂತಹ ಶ್ವಾನಗಳಿಗೆ ಕೆಲವು ರಕ್ಷಣೆಗಳಿರುತ್ತವೆ.
ಡೆನ್ವರ್ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಲಾಖೆಯ ಪ್ರಕಾರ, ಉದ್ಯೋಗಿಯ ಮುಖ ಹಾಗೂ ತುಟಿಯನ್ನು ಕಚ್ಚಲಾಗಿದ್ದರೆ, ಪ್ರಯಾಣಿಕರ ಮೊಣಕೈ ಅನ್ನು ಕಚ್ಚಲಾಗಿದೆ. ಇಯಾನ್ ಡನ್ಬರ್ ಶ್ವಾನ ಕಡಿತ ಮಾಪಕದ ಪ್ರಕಾರ, ಈ ಕಡಿತವನ್ನು ನಾಲ್ಕನೆಯ ಹಂತದ ಕಡಿತ ಎಂದು ಪರಿಗಣಿಸಲಾಗಿದೆ. ಆದರೆ, ಈ ಘಟನೆಯಲ್ಲಿ ಹಲವಾರು ಹಂತದ ನಾಲ್ಕು ಕಡಿತಗಳಾಗಿರುವುದರಿಂದ, ಈ ಕಡಿತವು ಐದನೆ ಹಂತದ ವ್ಯಾಪ್ತಿಗೆ ಬರುತ್ತದೆ.