ಮೈಸೂರು: ಜಿಲ್ಲೆಯ 32 ಸರ್ಕಾರಿ ಶಾಲೆಗಳು ಶೇಕಡಾ ನೂರಕ್ಕೆ ನೂರರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ ಪಡೆದಿರುವುದು ಸರ್ಕಾರಿ ಶಾಲೆಗಳ ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳು ಹಾಗೂ ಅತಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
32 ಸರ್ಕಾರಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಬಂದಿದೆ. ಅತಿ ಹೆಚ್ಚು ಅಂಕ ಗಳಿಸಿದ 10 ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಪೋಷಕರಿಗೆ ಉತ್ತಮ ಹೆಸರು ತನ್ನಿ ಎಂದರು. ಶೇ.100 ರಷ್ಟು ಫಲಿತಾಂಶ ಬಂದಿರುವ ಶಾಲೆಗಳ ಶಿಕ್ಷಕರು ಉತ್ತಮ ಪ್ರಯತ್ನ ಹಾಕಿ ಫಲಿತಾಂಶ ಬಂದಿದೆ. ಮುಂದಿನ ವರ್ಷಗಳಲ್ಲಿಯೂ ಉತ್ತಮ ಫಲಿತಾಂಶ ಬರುವಲ್ಲಿ ಶ್ರಮಿಸಿ. ನಮ್ಮ ಜಿಲ್ಲೆಯೂ ಟಾಪ್ 5 ಸ್ಥಾನದಲ್ಲಿ ಬರುವ ಹಾಗೆ ಪ್ರಯತ್ನ ಮಾಡೋಣ. ಉತ್ತಮ ಫಲಿತಾಂಶ ಬರುವಲ್ಲಿ ಶ್ರಮಿಸಿದ ಎಲ್ಲಾ ಪೋಷಕರು, ಶಿಕ್ಷಕರಿಗೆ, ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ತಂದೆ ತಾಯಿಗಳ ನಿರೀಕ್ಷೆಗಳು ಹೆಚ್ಚಾಗಿ ಇರುತ್ತವೆ. ಇಂಗ್ಲಿಷ್ ಭಾಷೆಯ ಬಗ್ಗೆ ಹಿಂಜರಿಕೆ ಬೇಡ. ಹೆಚ್ಚಿನ ಅಭ್ಯಾಸ ಮಾಡಿದರೆ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ. ಪಾಠದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿಯೂ ಹಾಗೂ ಆಟದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಅತಿ ಹೆಚ್ಚು ಅಂಕ ಗಳಿಸಿದ ಮೈಸೂರು ಗ್ರಾಮಾಂತರದ ಯರಗನಹಳ್ಳಿ ಸರ್ಕಾರಿ ಶಾಲೆಯ ಅಜಯ್.ಎಸ್ (621), ನಂಜನಗೂಡು ತಾಲೂಕಿನ ಆದರ್ಶ ವಿದ್ಯಾಲಯದ ಆಚುತ್ ಮೌರ್ಯ (616), ಕೃಷ್ಣರಾಜನಗರದ ಆದರ್ಶ ವಿದ್ಯಾಲಯದ ಮೋಕ್ಷ ಹೆಚ್ ಪಾಟೀಲ್ (615), ಟಿ ನರಸೀಪುರ ತಾಲೂಕಿನ ಆದರ್ಶ ವಿದ್ಯಾಲಯದ ಮೋನಿಷಾ ಡಿ (614),
ಟಿ ನರಸೀಪುರ ತಾಲೂಕಿನ ಆದರ್ಶ ವಿದ್ಯಾಲಯದ ಕೀರ್ತನ್ ಕುಮಾರ್ ಜಿ ಆರ್ (613), ಕೃಷ್ಣರಾಜನಗರದ ಆದರ್ಶ ವಿದ್ಯಾಲಯದ ಲಿಶಾ.ವಿ (612), ಟಿ ನರಸೀಪುರ ತಾಲೂಕಿನ ಆದರ್ಶ ವಿದ್ಯಾಲಯದ ಪ್ರಜ್ವಲ್ ಗೌಡ ಬಿ ಆರ್ (611), ಮೈಸೂರು ಗ್ರಾಮಾಂತರದ ಬೆಳವಾಡಿ ಸರ್ಕಾರಿ ಪ್ರೌಢಶಾಲೆಯ ಕೀರ್ತನಾ ಜಿ (610), ಮೈಸೂರು ದಕ್ಷಿಣ ವಲಯದ ಆದರ್ಶ ವಿದ್ಯಾಲಯದ ಪುಣ್ಯ ಆರ್ (609) ಹಾಗೂ ಕೃಷ್ಣರಾಜನಗರದ ಆದರ್ಶ ವಿದ್ಯಾಲಯದ ಸ್ಮಿತಾ ಕೆ.ಎಂ (608) ಅಂಕಗಳನ್ನು ಪಡೆದಿದ್ದು ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರ ಅರಸ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.