ಜೋಹಾನ್ಸ್ಬರ್ಗ್: ಈಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ ಕೈಗೊಂಡಿರುವ ಸಾಧಕ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಜೂನ್ 26ರಂದು ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮುಖ್ಯ ಅತಿಥಿಯಾಗಿದ್ದು, ಈ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ.
‘ಸದ್ಗುರು ಲಂಡನ್ನಿಂದ ಭಾರತಕ್ಕೆ ಮೋಟಾರ್ ಬೈಕ್ನಲ್ಲಿ ಜಾಥಾ ನಡೆಸಿದ್ದನ್ನು ನೋಡಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ನೆಲೆಸಿರುವ ಡಲ್ಸ್ಟ್ರೂಮ್ನಿಂದ ದಕ್ಷಿಣ ಆಫ್ರಿಕಾದಾದ್ಯಂತ 10 ಸಾವಿರ ಕಿ.ಮೀ. ನಡಿಗೆ ಕೈಗೊಂಡೆ. ಎಲ್ಲಿ ನಾನು ಬದುಕುತ್ತೇನೋ ಅಲ್ಲಿ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತೇನೆ’ ಎಂದು ‘ಮಣ್ಣು ಉಳಿಸಿ’ ರಾಯಭಾರಿ ಟೆಸ್ಕೆ ನಾಕಾಡಿಮೆಂಗ್ ಹೇಳಿದ್ದಾರೆ. ಈ ನಡಿಗೆಯನ್ನು ಅವರು ಒಂಬತ್ತು ತಿಂಗಳ ಕಾಲ ನಡೆಸಿದ್ದಾರೆ.