ಹಾವೇರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಚುನಾವಣೆ ಅಕ್ರಮಗಳಿಗೆ ಬ್ರೇಕ್ ಹಾಕಲು ಚುನಾವಣಾ ಅಧಿಕಾರಿಗಳು ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ ಹಾವೇರಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 11 ಕೆಜಿ ಬಂಗಾರ ಹಾಗೂ 74 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ.
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಅಪಾರ ಪ್ರಮಾಣದ ಬಂಗಾರ, ಬೆಳ್ಳಿ ಪತ್ತೆಯಾಗಿದೆ. ಹಾವೇರಿ ಹೊರವಲಯದ ಅಜ್ಜಯ್ಯನ ಬಳಿಯ ಚೆಕ್ ಪೋಸ್ಟ್ ನಲ್ಲಿ ಅಪಾರ ಪ್ರಮಾಣ ಚಿನ್ನಾಭರಣ ಪತ್ತೆಯಾಗಿದೆ. ಕಳೆದ ಕಳೆದ ಎರಡು ದಿನಗಳ ಹಿಂದೆ ಪೊಲೀಸರ ಪರಿಶೀಲನೆ ವೇಳೆ ವಾಹನ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅನುಮಾತಿ ಇಲ್ಲದೆ ಸಾಗಿಸುತ್ತಿದ್ದ ಬಂಗಾರ, ಬೆಳ್ಳಿ ಪತ್ತೆಯಾಗಿದ್ದು, ಹಾವೇರಿ ತಹಶೀಲ್ದಾರ್ ಗಿರೀಶ್ ಸ್ವಾದಿ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.
ವಾಹನದಲ್ಲಿ ಪತ್ತೆಯಾಗಿರುವ ವಸ್ತುಗಳ ಬೆಲೆ ಸುಮಾರು 6.93 ಕೋಟಿ ಮೌಲ್ಯ ಅಂತಾ ಹೇಳಲಾಗಿದೆ. ಹಾವೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿನ್ನದ ಸರ, ಉಂಗುರು, ಬಳೆ, ಓಲೆ ಸೇರಿದಂತೆ ಅನೇಕ ಆಭರಣಗಳು ಪತ್ತೆಯಾಗಿದೆ. ಉಳಿದಂತೆ ಬೆಳ್ಳಿಯ ಲೋಟ, ತಟ್ಟೆ, ಪೂಜಾ ಸಾಮಗ್ರಿಗಳು ಹಾಗೂ ಬೆಳ್ಳಿಯ ಪರಿಕರಗಳು ಸೀಜ್ ಮಾಡಲಾಗಿದೆ.