ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರವಿಂದನಗರದ ಪಿ.ಟಿ.ಕ್ವಾಟರ್ಸ್ ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ೧೨ ಜನರನ್ನು ಬಂಧಿಸಿ, ೧ ಕೆಜಿ ೩೬೫ ಗ್ರಾಂ ಗಾಂಜಾವಶಪಡಿಸಿಕೊಳ್ಳಲಾಗಿ
ಹುಬ್ಬಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ, ೯ ಮೊಬೈಲ್, ಮೂರು ಬೈಕ್, ಎರಡು ಸಾವಿರ ಹಣ ಒಟ್ಟು ೪.೫೨ ಸಾವಿರ ಮೌಲ್ಯದ ಸಾಮಾಗ್ರಿ ಜಪ್ತ ಮಾಡಲಾಗಿದೆ .ನಗರದ ವಿವಿಧ ಬಡವಾಣೆಯ ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ,
ಇಸ್ಮಾಯಿಲ್ ಮೆಹಬೂಬಾಲಿ, ಜಾಪರ @ ಬಾಂಬೆಜಾಫರ ಮಕ್ಕುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ@ಬಬ್ಲೂ ಜಮೀಲಾಅಹ್ಮದ್, ಸಲೀಂ ಹಜರತಸಾಬ, ಕರೀಂ ಜಾಂಗೀರಖಾನ ಬಂಧಿತರು
ಬುಧವಾರ ರಾತ್ರಿ ೧೦.೩೦ ಕ್ಕರ ಬಂದ ಮಾಹಿತಿ ಆಧರಿಸಿ ಆರೋಪಿತರನ್ನು ಬಂಧಿಸಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸುದ್ದಿಗಾರಿಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ತಿಳಿಸಿದ್ದಾರೆ. ಹಳೇಹುಬ್ಬಳ್ಳಿ ಠಾಣೆ ಸಿಪಿಐ ಸುರೇಶ ಯಳ್ಳೂರ ಅವರ ತಂಡ ಆರೋಪಿಸಿ ಬಂಧಿಸಿದೆ. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಇದ್ದರು.