12 ವರ್ಷದ ಅದ್ಭುತ ಪ್ರತಿಭೆ ಕ್ಲೋವಿಸ್ ಹಂಗ್ ಕ್ಯಾಲಿಫೋರ್ನಿಯಾದ ಫುಲ್ಲರ್ಟನ್ ಕಾಲೇಜಿನಿಂದ 5 ಪದವಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅತ್ಯಂತ ಕಿರಿಯ ಪದವೀಧರರಾಗಿದ್ದ 13 ವರ್ಷದ ಜ್ಯಾಕ್ ರಿಕೊ ಅವರು ನಿರ್ಮಿಸಿದ ಹಿಂದಿನ ದಾಖಲೆಯಿಂದ ಪ್ರೇರಿತರಾಗಿ 9 ನೇ ವಯಸ್ಸಿನಲ್ಲಿ ಕ್ಲೋವಿಸ್ ಹಂಗ್ ತಮ್ಮ ಕಾಲೇಜಿನ ಪ್ರಯಾಣ ಪ್ರಾರಂಭಿಸಿದರು ಎಂದು ಎನ್ಬಿಸಿ ವರದಿ ಮಾಡಿದೆ.
ರಿಕೊ ಸಾಧನೆಯಿಂದ ಪ್ರೇರಿತರಾದ ಕ್ಲೋವಿಸ್ ಹಂಗ್, ರಿಕೊರಂತೆ ಹೆಚ್ಚು ಓದುವ ಆಸೆಯನ್ನು ಇಟ್ಟುಕೊಂಡ ಹಂಗ್ ಅವರ ಧಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆ ಎಂದು ಒಹಿಸಿರಲಿಲ್ಲ ಎಂದು ತಿಳಿಸಿದರು. ಪದವಿ ಪ್ರದಾನ ದಿನದಂದು, ಹಂಗ್ ಹೆಮ್ಮೆಯಿಂದ ಟೋಪಿ ಮತ್ತು ಗೌನ್ ಧರಿಸಿ ವೇದಿಕೆಯ ಮೇಲೆ ಅವರ ವಯಸ್ಸಿಗಿಂತ ದೊಡ್ಡವರಾದ ಸಹ ಪದವೀಧರರ ಜೊತೆ ಸಮಾರಂಭದಲ್ಲಿ ಭಾಗಿಯಾದರು. ಅವರು ಇತಿಹಾಸ, ಸಮಾಜ ವಿಜ್ಞಾನ, ಸಾಮಾಜಿಕ ನಡವಳಿಕೆ ಮತ್ತು ಸ್ವ-ಅಭಿವೃದ್ಧಿ, ಕಲೆ ಮತ್ತು ಮಾನವ ಅಭಿವ್ಯಕ್ತಿ, ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಐದು ಸಹಾಯಕ ಕಲಾ ಪದವಿಗಳನ್ನು ಪಡೆದರು. ಮುಂಬರುವ ವರ್ಷದಲ್ಲಿ ಮತ್ತೊಂದು ಪದವಿಯನ್ನು ಮುಂದುವರಿಸುವ ಯೋಜನೆಯನ್ನು ಹಂಗ್ ವ್ಯಕ್ತಪಡಿಸಿದ್ದಾನೆ.
ವಿಶೇಷ ಪ್ರವೇಶ ಕಾರ್ಯಕ್ರಮದ ಮೂಲಕ ಹಂಗ್ ಫುಲ್ಲರ್ಟನ್ ಕಾಲೇಜಿಗೆ ಸೇರಿದರು, ಹಂಗ್ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು, ಹಂಗ್ನ ತಾಯಿ, ಸಾಂಗ್ ಚೋಯ್, ಅವನ ಕಾಲೇಜು ತರಗತಿಗಳನ್ನು ಹೋಮ್ಸ್ಕೂಲಿಂಗ್ ಪಠ್ಯಕ್ರಮದೊಂದಿಗೆ ಸಂಯೋಜಿಸಿದರು. ಅವರು ಹಂಗ್ ಅವರ ಪ್ರಬುದ್ಧತೆ, ಶ್ರದ್ಧೆ, ಸ್ವಯಂ-ಶಿಸ್ತು ಮತ್ತು ಪ್ರೇರಣೆಯನ್ನು ಶ್ಲಾಘಿಸಿದರು, ಸಾಂಪ್ರದಾಯಿಕ ಶಾಲೆಗಳಿಗೆ ಹೋಗುವುದರಿಂದ ಹಂಗ್ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಹೋಂ ಸ್ಕೂಲಿಂಗ್ ಜೊತೆಗೆ ಕಾಲೇಜನ್ನು ಆಯ್ಕೆ ಮಾಡಿರುವುದು ಮಗನ ಸಾಧನೆಗೆ ಪೂರಕವಾಗಿದೆ ಎಂದರು.