ಅಲಚೂರು ಅರಸರ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವರು ಮತ್ತು ಸಾಮಾಜಿಕ ಸುಧಾರಕರಾಗಿದ್ದವರು ಬಸವಣ್ಣ.ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡದ ಕವಿಯಾಗಿದ್ದರು.ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಬಸವಣ್ಣ ಲಿಂಗ ಸಾಮಾಜಿಕ ತಾರತಮ್ಯ ಮೂಡನಂಬಿಕೆಗಳನ್ನು ನಿವಾಕರಿಸಿದರು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿ ಆಗಿ ಅವರ ಅನುಭವ ಮಂಟಪ ಅಥವಾ ಅಧ್ಯಾತ್ಮಿಕ ಅನುಭವದ ಭವನದ ಇಲ್ಲಿ ಎಲ್ಲಾ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರನ್ನು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತ ಕೋರಿದರು.
ಬಾಲ್ಯದ ಜೀವನ 8ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ ಬಸವಣ್ಣನವರು ತನಗಿಂತ ಹಿರಿಯರಾದ ಅಕ್ಕ ನಾಗಮ್ಮನಿಗೆ ಕೊಡಲು ಹೇಳುತ್ತಾರೆ. ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು. ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ ಬಸವಣ್ಣ ಪುರುಷ ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.
ಬಸವಣ್ಣ 12 ವರ್ಷಗಳ ಕಾಲ ಕೂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಲಕುಲಿಶಾ ಪಶುಪಾಠ ಸಂಪ್ರದಾಯದ ಒಂದು ಶೈವ ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು. ಬಸವ ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದ ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ್ಯ ಬಿಜ್ಜಳ ಪ್ರಧಾನಮಂತ್ರಿಗಳ ಮಗಳು.
ಬಸವಣ್ಣನವರ 1500 ಕ್ಕೊ ಹೆಚ್ಚು ವಚನಗಳು ದೊರೆತಿವೆ. ಅವರ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ. ಧರ್ಮವೇ ಧರ್ಮದ ಮೂಲವಯ್ಯ. ಅಯ್ಯಾ ಎಂದರೆ ಸ್ವರ್ಗ. ಎಲ್ಲವೂ ಎಂದರೆ ನರಕ. ಎಂದು ಸಾರುವ ಮೂಲಕ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದವರು.
ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅವರ ಕೊಡುಗೆ ಅಪಾರವಾದದ್ದು. ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಶ್ರೀ ಗುರುಸೇನಾ ಯುವಕ ಸಂಘದ ವತಿಯಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ. ವಚನ ಹೇಳುವುದರ ಮುಖಾಂತರ ಇಂದು ಅದ್ದೂರಿಯಾಗಿ ಬಸವ ಜಯಂತಿ ಆಚರಿಸಿದರು. ಇದೇ ಸಂದರ್ಭದಲ್ಲಿ ಸುನಿಲ ಸಿಕ್ಕಲಗಾರ. ಪ್ರತಾಪ ಸಿಕ್ಕಲಗಾರ. ರಾಜು ಹಳಿಂಗಳಿ. ಬಾಬು ಮಹಾಜನ. ಬಾಬು ಗಂಗಾವತಿ. ಹನುಮಂತ ಸಿಕ್ಕಲಗಾರಹ ಗುರು ಸಿಕ್ಕಲಗಾ. ಈರಣ್ಣ ಗುಣಕಿ. ಅನಸೋಯಾ ವಜ್ರಮಟ್ಟಿ. ಗಿರಿಜಾ ಟೇಂಗಿನಕಾಯ. ಸುಸಿಲಮಹಾನಂದಾ ಬೇಳಗಲಿ. ಬಸವ ಕೇಂದ್ರ ಅಣ್ಣನ ಬಳಗ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ