ತಾಲೂಕಿನ ಬೆಲವಂತರ ಹತ್ತಿರ ಇರುವ ಬೆಡತಿ ಹಳ್ಳ(ಶಾಲ್ಮಲಾ) ನದಿಗೆ ಬಂದರ್ ನಿರ್ಮಾಣದ ಮೂಲಕ ತಾಲೂಕಿನ 35 ಕೆರೆಗಳಿಗೆ ನೀರು ತುಂಬಿಸುವ ಪಂಪ್ ಹೌಸ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವ ಲಾಡ್, ತಾಲೂಕಿನ ಬಹು ದಿನಗಳ ಬೇಡಿಕೆಯಾಗಿದ್ದು ಅದರಂತೆ 130 ಕೋಟಿ ವೆಚ್ಚದಲ್ಲಿ ಪಂಪ್ಹೌಸ್ ನಿರ್ಮಿಸಲಾಗಿದ್ದು,
ಇದರಿಂದ 35 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುವುದು.ಈ ಮೂಲಕ ಮೂಲಕ ಪ್ರತಿಯೊಂದು ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಅವುಗಳ ಮುಂದಿನ ಹೆಚ್ಚಿನ ಅಭಿವೃದ್ಧಿ ಪಡಿಸಲು ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ತಹಶೀಲ್ದಾರ್ ಗೋಣೆನವರ, ತಾಪಂ ಸಿಇಓ ಪರಶುರಾಮ ಸಾವಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮುರಳಿ, ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಎಸ್.ಆರ್. ಪಾಟೀಲ್, ಮಾಜಿ ತಾಲೂಕಾಧ್ಯಕ್ಷ ಬಿ.ವೈ. ಪಾಟೀಲ, ಆಪ್ತ ಕಾರ್ಯದರ್ಶಿ ಹರೀಶ್ ಮಠದ, ಸೋಮಶೇಖರ್ ಬೆನ್ನೂರು, ನರೇಶ್ ಮಲ್ಲಾಡ, ಉಳ್ಳಪ್ಪ ಬಳಿಗೇರ, ಮಹೇಶ್ ಅಲಗೂರ, ಬಾಳು ಖಾನಾಪುರ್, ಹನುಮಂತ ಹರಿಜನ್ ಇದ್ದರು.