ಬೆಂಗಳೂರು: ಕಳ್ಳರು ಚಾಪೆ ಕೆಳಗೆ ನುಸುಳಿದ್ರೆ, ಪೊಲೀಸರು ರಂಗೋಲಿ ಕೆಳಗಡೆ ನುಸಳುತ್ತಾರೆ ಅನ್ನೊ ಮಾತಿದೆ.. ಖತರ್ನಾಕ್ ಕಳ್ಳರು ಅದೆಂಥೆತಾ ಖತರ್ನಾಕ್ ಕೆಲಸಕ್ಕೆ ಮುಂದಾದ್ರೂ ಪೊಲೀಸರು ಬಗ್ಗು ಬಡೀತಾರೆ.. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ಟೋರಿ ಇದೆ ನೋಡಿ..
ಈ ಫೋಟೋದಲ್ಲಿ ಸಣ್ಣ ಸಣ್ಣ ಕವರ್ನಲ್ಲಿರುವ ಇದನ್ನು ನೋಡಿದ್ರೆ ಯಾವುದೇ ಚಾಕಲೇಟ್ ಅಥವಾ ಯಾವುದೋ ಸ್ವೀಟ್ ಅನ್ನಿಸತ್ತೆ ಅಲ್ವಾ.. ಆದ್ರೆ ಇದು ಸ್ವೀಟ್ ಅಲ್ಲಾ ಚಾಕ್ಲೇಟೋ ಅಲ್ಲ.. ಹೌದು.. ಇದು ಮಾದಕ ವಸ್ತುವಾದ ಚರಸ್.. ಯಸ್.. ಇದು ಎಲ್ಲಿಂದ ಬಂತು, ಹೇಗೆ ಬಂತು ಅಂತ ಕೇಳಿದ್ರೆ ನೀವು ಸಹ ಆಶ್ಚರ್ಯ ಪಡ್ತೀರಾ.. ಈ ಖತರ್ನಾಕ್ ಗಳು ಇಂಡಿಯನ್ ಪೋಸ್ಟ್ ಮೂಲಕ ಮಾದಕವಸ್ತುಗಳನ್ನು ಪಾರ್ಸೆಲ್ ತರಿಸ್ತಾಯಿರೋದು ಇದೀಗ ಬೆಳಕಿಗೆ ಬಂದಿದೆ.. ಬೇರೆ ಬೇರೆ ರಾಜ್ಯಗಳಿಂದ ಪೋಸ್ಟ್ ಮೂಲಕ ನಗರಕ್ಕೆ ಮಾದಕವಸ್ತು ಸಫ್ಲೈ ಮಾಡುವ ಜಾಲ ಇದೀಗ ಪತ್ತೆಯಾಗಿದೆ.. ಜಾರ್ಖಂಡ್ ಮೂಲದ ರಿತಿಕ್ ಎಂಬಾತನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ..
ಖಚಿತ ಮಾಹಿತಿ ಮೇರೆಗೆ ಪೋಸ್ಟ್ ಟ್ರ್ಯಾಪ್ ಮಾಡಿದ ಸಿಸಿಬಿ ಪೊಲೀಸರು. ಡೆಲಿವರಿ ಜಾಗದಲ್ಲಿಯೇ ಪರಿಶೀಲನೆ ನಡೆಸಿದ್ದಾರೆ..
ಗಿಫ್ಟ್ ಬಾಕ್ಸ್ ರೂಪದಲ್ಲಿ ನಗರಕ್ಕೆ ಬಂದಿದ್ದ ಚರಸ್, ಮತ್ತು ಅದನ್ನು ರಿಸೀವ್ ಮಾಡಿದ ವ್ಯಕ್ತಿಯ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ..
ಪಾರ್ಸಲ್ ಬಗ್ಗೆ ಖಚಿತ ಮಾಹಿತಿ ಇದ್ದ ಸಿಸಿಬಿ ಪೊಲೀಸರು ಪಕ್ಕಾ ಪ್ಲ್ಯಾನ್ ಮಾಡಿ, ಪಾರ್ಸೆಲ್ ಬರುವಾಗ ಟ್ರ್ಯಾಕ್ ಮಾಡಿ
ನಂತರ ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡಿದಾಗ ಚರಸ್ ಇರುವುದು ಪತ್ತೆಯಾಗಿದೆ.. ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ..
ರಿಷಿಕೇಷದಿಂದ ಇಂಡಿಯಾ ಪೋಸ್ಟ್ ಮೂಲಕ ಚರಸ್ ಕಳಿಸಿದ್ದ ಮತ್ತೊಬ್ಬ ಆರೋಪಿಯಾದ ಅದಿತ್ ಸರ್ವೋತ್ತಮ್ ಎಂಬುವನಿಂದ ಚರಸ್ ಪಾರ್ಸೆಲ್ ಬಂದಿದೆ ಎಂದು ಗೊತ್ತಾಗಿದೆ.. ಇನ್ನು ಆತನಿಗಾಗಿಯು ಸಹ ಪೊಲೀಸರು ಬಲೆ ಬೀಸಿದ್ದಾರೆ.. ಇನ್ನು ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.. ಒಟ್ಟಿನಲ್ಲಿ ಇಷ್ಟುದಿವಸ ಕಣ್ಣಾಮುಚ್ಚಾಲೆ ಆಡಿಕೊಂಡಿದ್ದ ಆರೋಪಿಗಳಿಗೆ ಪೊಲೀಸರು ಚಳಿ ಬಿಡಿಸಿರೋದಂತು ಸುಳ್ಳಲ್ಲ..