ಮಾರ್ಚ್ ತಿಂಗಳು ಮುಗಿದು ಈಗ ಏಪ್ರಿಲ್ ಆರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ 30 ದಿನಗಳಲ್ಲಿ 14 ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ವಿವಿಧ ರಾಜ್ಯಗಳನ್ನು ಸೇರಿ ಒಟ್ಟು 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಏಪ್ರಿಲ್ 2024 ರಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ವಿವಿಧ ರಾಜ್ಯಗಳಲ್ಲಿ ಬೀಳುವ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳಿಗೆ ಅನುಗುಣವಾಗಿ ರಜೆಯ ಪಟ್ಟಿಯನ್ನು ತಯಾರಿಸಲಾಗಿದೆ. ಮುಂದಿನ ತಿಂಗಳು ನೀವು ಯಾವುದೇ ಪ್ರಮುಖ ಬ್ಯಾಂಕ್ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಬೇಕಾದ್ರೆ, ಖಂಡಿತವಾಗಿಯೂ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಇಲ್ಲಿಯೇ ಪರಿಶೀಲಿಸಿಕೊಳ್ಳಿ.
1 ಏಪ್ರಿಲ್ 2024- ದೇಶದಾದ್ಯಂತ ಬ್ಯಾಂಕ್ಗಳಿಗೆ ರಜೆ ಇರುತ್ತದೆ.
5 ಏಪ್ರಿಲ್ 2024- ಬಾಬು ಜಗಜೀವನ್ ರಾಮ್ ಜನ್ಮದಿನ ಹಾಗೂ ಜುಮಾತ್ ಜುಮಾತುಲ್ ವಿದಾ ಕಾರಣ ತೆಲಂಗಾಣ ರಾಜ್ಯ, ಜಮ್ಮು ಹಾಗೂ ಶ್ರೀನಗರದಲ್ಲಿ ಬ್ಯಾಂಕ್ಗಳಿಗೆ ರಜೆಯನ್ನು ಇರುತ್ತದೆ.
7 ಏಪ್ರಿಲ್ 2024- ಭಾನುವಾರ
9 ಏಪ್ರಿಲ್ 2024- ಗುಡಿ ಪಾಡ್ವಾ/ಯುಗಾದಿ ಹಬ್ಬ ಮತ್ತು ತೆಲುಗು ಹೊಸ ವರ್ಷ ಹಾಗೂ ಮೊದಲ ನವರಾತ್ರಿಯ, ಬೇಲಾಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದ ಬ್ಯಾಂಕ್ಗಳಿಗೆ ರಜೆ ಇರುತ್ತದೆ.
10 ಏಪ್ರಿಲ್ 2024- ಈದ್ ಮಿಲಾದ್ ಇರುವ ಕಾರಣದಿಂದ ಈ ದಿನ ರಜಾ ದಿನವಾಗಿರುತ್ತದೆ.
11 ಏಪ್ರಿಲ್ 2024- ಈದ್ ಕಾರಣ, ಚಂಡೀಗಢ, ಗ್ಯಾಂಗ್ಟಾಕ್, ಕೊಚ್ಚಿ ಹೊರತುಪಡಿಸಿ ಇಡೀ ದೇಶದಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ.
13 ಏಪ್ರಿಲ್ 2024- ಎರಡನೇ ಶನಿವಾರ
14 ಏಪ್ರಿಲ್ 2024- ಭಾನುವಾರ
15 ಏಪ್ರಿಲ್ 2024- ಬೊಹಾಗ್ ಬಿಹು ಹಾಗೂ ಹಿಮಾಚಲ ದಿನದ ಕಾರಣ ಗುವಾಹಟಿ ಮತ್ತು ಶಿಮ್ಲಾದಲ್ಲಿ ಬ್ಯಾಂಕ್ಗಳನ್ನು