ಬೆಂಗಳೂರು: 14 ಗಂಟೆಗಳ ಕೆಲಸದ ಅವಧಿ ಹೆಚ್ಚಳ ಪ್ರಸ್ತಾಪವನ್ನು ಕೈಬಿಡುವಂತೆ ಒತ್ತಾಯಿಸಿ ಐಟಿ ಉದ್ಯೋಗಿಗಳು ಇಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು ಸರ್ಕಾರ 14 ಗಂಟೆಗಳ ಕೆಲಸದ ಅವಧಿ ನಿಗದಿ ಪಡಿಸಿರುವುದಕ್ಕೆ ಐಟಿ ಉದ್ಯೋಗಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಕೆಲಸದ ಅವಧಿ ಹೆಚ್ಚಳದ ಪ್ರಸ್ತಾವನೆ ಕೈ ಬಿಡುವಂತೆ ಒತ್ತಾಯಿಸಿ, ಐಟಿ ಉದ್ಯೋಗಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ದಿನದ 14 ಗಂಟೆಗಳ ಕಾಲ ಸತತ ಕೆಲಸ ಮಾಡುವುದರಿಂದ ಉದ್ಯೋಗಿಗಳ ಆರೋಗ್ಯ ಹದಗೆಡುತ್ತದೆ. ಈಗಿರುವ ಕೆಲಸದ ಒತ್ತಡ ತಡೆಯಲಾರದೆ ಎಷ್ಟೋ ಮಂದಿ ಉದ್ಯೋಗಿಗಳು ಡಿಪ್ರೆಷನ್ ಗೆ ಒಳಗಾಗುತ್ತಿದ್ದಾರೆ.
ಈಗ ಅವಧಿಯನ್ನು ಮತ್ತಷ್ಟು ಹೆಚ್ಚಳ ಮಾಡಿದರೆ, ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಉದ್ಯೋಗಿಗಳು ಆರೋಪಿಸಿದ್ದಾರೆ.