2024ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮಾಡೆಲ್ ರಿಯಾ ಸಿಂಘಾ ಮುಡಿಗೇರಿಸಿಕೊಂಡಿದ್ದಾರೆ. 19 ವರ್ಷದ ಯುವತಿ ರಿಯಾ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಸಿದ್ದರು. ರಿಯಾ ಸಿಂಘಾ 2024ರ ಇಂಟರ್ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಗುಜರಾತ್ ಮೂಲಕ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಬಳಿಕ ಮಾತನಾಡಿದ್ದು, ‘ಇಂದು ಪ್ರಶಸ್ತಿ ಗೆದ್ದ ನಂತರ ನಾನು ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇನೆ. ಅಲ್ಲಿ ನಾನು ಕಿರೀಟಕ್ಕೆ ಅರ್ಹನೆಂದು ಪರಿಗಣಿಸಿದೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ’ ಎಂದರು.
ಬಾಲಿವುಡ್ ನಟಿ ಊರ್ವಶಿ ರೌಟೇಲರವರು ರಿಯಾರವರಿಗೆ ಕಿರೀಟ ತೊಡಿಸಿದರು. ಬಳಿಕ ಮಾತನಾಡಿದ ಅವರು, ‘ಎಲ್ಲಾ ಹುಡುಗಿಯರ ಭಾವನೆಗಳ ಬಗ್ಗೆ ತಿಳಿದಿದೆ. ವಿಜೇತರು ಅದ್ಭುತವಾಗಿದ್ದಾರೆ. ವಿಶ್ವ ಸುಂದರಿಯ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ. ಊರ್ವಶಿ ರೌತೆಲಾ ಅವರೇ ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. .
19 ವರ್ಷದ ರಿಯಾ ಸಿಂಘಾ ಗುಜರಾತ್ ಮೂಲದವರಾಗಿದ್ದು, ಸ್ಪರ್ಧೆಯಲ್ಲಿದ್ದ 50ಕ್ಕೂ ಅಧಿಕ ಸುಂದರಿಯರನ್ನು ಹಿಂದಿಕ್ಕಿ ವಿಜೇತರಾಗಿದ್ದಾರೆ. ರಿಯಾ ಸಿಂಘಾ ಸೋಶಿಯಲ್ ಮೀಡಿಯಾದಲ್ಲಿ 39 ಸಾವಿರಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದೀಗ ರಿಯಾ ಸಿಂಘಾ ಇಂಟರ್ನ್ಯಾಷನಲ್ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಕಿರೀಟ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.
ತೀರ್ಪುಗಾರರ ಪ್ಯಾನಲ್ನಲ್ಲಿ ನಿಖಿಲ್ ಆನಂದ್, ಊರ್ವಶಿ ರೌತೆಲಾ, ವಿಯೆಟ್ನಾಂ ತಾರೆ ನ್ಗುಯೆನ್ ಕ್ವಿನ್, ಫ್ಯಾಷನ್ ಫೋಟೋಗ್ರಾಫರ್ ರಿಯಾನ್ ಫೆರ್ನಾಂಡಿಸ್ ಮತ್ತು ಉದ್ಯಮಿ ರಾಜೀವ್ ಶ್ರೀವಾಸ್ತವ ಇದ್ದರು. ಬಾಲಿವುಡ್ ನಟಿ ಊರ್ವಶಿ ರೌತೆಲಾ 2015ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಭಾರತ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.